ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ಏರಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಪೈಪೋಟಿ ಇದ್ದು, ಡಿಕೆಶಿ ನಾನೇ ಸಿಎಂ ಆಗಬೇಕು ನನಗೆ ಬೇರೆ ಯಾವುದೇ ಹುದ್ದೆ ಬೇಡ ಎಂದು ಪಟ್ಟು ಹಿಡಿದಿದ್ದಾರೆ, ಕೈ ಪಕ್ಷ ಗೆದ್ದರೂ ಇನ್ನೂ ಸಿಎಂ ಆಯ್ಕೆ ಮಾತ್ರ ಕಗ್ಗಂಟಾಗಿಯೇ ಉಳಿದಿದೆ.
ಸಿದ್ದರಾಮಯ್ಯ, ಡಿಕೆಶಿ ನಡುವಿನ ಸಿಎಂ ಕುರ್ಚಿ ಫೈಟ್ ತಣ್ಣಗಾಗಿಸಲು ಇವರ ಜೊತೆಗೆ ಮಾತುಕತೆಗೆ ಪ್ರಿಯಾಂಕ ಗಾಂಧಿ ಒಪ್ಪಿದ್ದಾರೆ. ಪಕ್ಷದ ಯಾವ ವರಿಷ್ಠರೂ ಮಾತುಕತೆ ನಡೆಸಿದರೂ ಇಬ್ಬರೂ ನಾಯಕರ ಮನವೊಲಿಕೆ ಸಾಧ್ಯವಾಗುತ್ತಿಲ್ಲ. ಇದೀಗ ಈ ಸಮಸ್ಯೆ ಬಗೆಹರಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಎಂಟ್ರಿ ಕೊಡುತ್ತಿದ್ದಾರೆ. ಇಬ್ಬರ ಜೊತೆಗೆ ಮಾತುಕತೆಗೆ ಪ್ರಿಯಾಂಕ ಗಾಂಧಿ ಒಪ್ಪಿದ್ದಾರೆ.
ಇನ್ನೂ ಸಹ ಸಿಎಂ ಆಯ್ಕೆಯಾಗಿಲ್ಲ, ಯಾವುದೇ ಗಾಳಿ ಸುದ್ದಿಗೆ ಕಿವಿಕೊಡಬೇಡಿ, ಖರ್ಗೆ ಇನ್ನೂ ಅಂತಿಮ ನಿರ್ಧಾರ ಮಾಡಿಲ್ಲ, ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಅಂತಿಮ ತೀರ್ಮಾನ ಮಾಡಲಾಗುವುದು ಎಂಉ ಸುರ್ಜೆವಾಲಾ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತವರು ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯ ಪೊಲೀಸರಿಗೆ ಅಲರ್ಟ್ ಆಗಿರಲು ಉನ್ನತ ಅಧಿಕಾರಿಗಳು ಸೂಚಿಸಿದ್ದಾರೆ.ಡಿಕೆಶಿಗೆ ಸಿಎಂ ಸ್ಥಾನ ತಪ್ಪಿರುವ ಹಿನ್ನೆಲೆ ಗಲಾಟೆ, ಪ್ರತಿಭಟನೆ ಸಾಧ್ಯತೆ ಇರೋದ್ರಿಂದ ಯಾವುದೇ ಪ್ರತಿಭಟನೆ ನಡೆಸದಂತೆ ಬೆಂಬಲಿಗರಿಗೆ ಎಚ್ಚರಿಕೆ ನೀಡಲಾಗಿದೆ.