ಮೈಸೂರು : ವರುಣಾಗೆ ಸೊಮಣ್ಣನಾದರೂ ಬರಲಿ, ಯಾರಾದರೂ ಬರಲಿ, ಗೆಲ್ಲೋದು ನಾನೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿ, ಮತದಾರರ ಮೇಲೆ ವಿಶ್ವಾಸ ಇಟ್ಟಿದ್ದೇನೆ. ಸಿದ್ದರಾಮಯ್ಯ ಅವರನ್ನು ಗೆಲ್ಲಿಸಬೇಕೆಂದು ಮತದಾರರು ತೀರ್ಮಾನ ಮಾಡಿದ್ದಾರೆ “ವರುಣಾದಲ್ಲಿ ಈ ಬಾರಿ ಗೆಲುವು ನನ್ನದೇ ಎಂದರು.
ಸೋಮಣ್ಣ ಈಗ ಪ್ರಚಾರಕ್ಕೆ ಬಂದಿದ್ದಾರೆ. ನನ್ನ ಮಗ ಈಗಾಗಲೇ ಪ್ರಚಾರ ಮಾಡಿ ಮುಗಿಸಿದ್ದಾನೆ. ಈಗಲೂ ರಾಹು ಕೇತುಗಳು ಇದ್ದಾರೆ. ನಾನು ಅದರ ಬಗ್ಗೆ ಮಾತನಾಡಲ್ಲ” ಎರಡೂ ಪಕ್ಷಗಳು ಸೇರಿ ನನ್ನನ್ನು ಮುಗಿಸಲು ಯತ್ನಿಸಿದ್ದಾರೆ.
ಎರಡು ಪಕ್ಷಗಳಿಗೆ ನಾನೇ ಟಾರ್ಗೆಟ್. ಆದರೆ ರಾಜ್ಯದ ಜನರ ಆಶೀರ್ವಾದ ಇರುವವರೆಗೂ ನನ್ನನ್ನ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ, ಇದು ನನ್ನ ಕೊನೆಯ ಚುನಾವಣೆ. ಯಾರೇ ನಿಂತರೂ ವರುಣಾ ಜನರ ತೀರ್ಪು ಅಂತಿಮ , ಈ ಬಾರಿ ನಾನೇ ಗೆಲ್ತಿನಿ ಎಂದರು.
ಬಿಜೆಪಿಯಿಂದ ಯಾರೇ ಸ್ಪರ್ಧೆ ಮಾಡಿದರೂ, ನಮಗೆ ಭಯವಿಲ್ಲ. ಗೆಲ್ಲಬೇಕೆಂದು ಎಲ್ಲರೂ ತಂತ್ರ ಮಾಡುತ್ತಾರೆ. ಅಂತಿಮವಾಗಿ ವರುಣ ಕ್ಷೇತ್ರದಲ್ಲಿ ನಾವೇ ಗೆಲ್ಲೋದು. ಈ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದೇವೆ, ನಾನು ನನ್ನ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದು ಭರವಸೆ ನೀಡಿದರು.