ಬೆಂಗಳೂರು: ಯಾರು ಸಿಎಂ ಆಗಬೇಕೆಂದು ಹೈಕಮಾಂಡ್ ತೀರ್ಮಾನಿಸಲಿದೆ. ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಸಿಎಂ ಆದರೆ ಕೆಲಸ ಮಾಡಲು ಸಿದ್ಧ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ , ಬಿಜೆಪಿ ಬಂದ ಮೇಲೆ ಹೊಸ ಸಹಕಾರ ಇಲಾಖೆ ಮಾಡಿದ್ದಾರೆ. ಸಹಕಾರ ಇಲಾಖೆ ರಾಜ್ಯದ ವಿಷಯ. ಈಗ ಎಲ್ಲ ರಾಜ್ಯಗಳಲ್ಲಿ ಹಾಲು ಒಕ್ಕೂಟಗಳನ್ನು ಮಾಡಿದ್ದಾರೆ. ಆಯಾ ರಾಜ್ಯಗಳಲ್ಲಿ ರೈತರ ಸಂಘಟನೆ ಮಾಡುವ ಮೂಲಕ ಹಾಲು ಸಂಗ್ರಹಿಸುವ ಉದ್ದೇಶವಿದೆ. ರೈತರ ಆದಾಯ ಹೆಚ್ಚಿಸಲು ಹಾಲು ಒಕ್ಕೂಟ ಮಾಡಲಾಗಿದೆ. ಬೇಕಾದ್ರೆ ಗುಜರಾತ್ನಲ್ಲಿ ಮಿಲ್ಕ್ ಸೊಸೈಟಿ ಮಾಡಿಕೊಳ್ಳಲಿ. ಕರ್ನಾಟಕಕ್ಕೆ ಯಾಕೆ ಬರಬೇಕೆಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬಂಡೀಪುರ ಸಫಾರಿ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಕಾಣದ ಹುಲಿ ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.