ಬಾಗಲಕೋಟೆ: ಒಬ್ಬ ಸಿದ್ದರಾಮಯ್ಯ ಹೋದರೆ ಸಾವಿರಾರು ಸಿದ್ದರಾಮಯ್ಯ ಜನಿಸ್ತಾರೆ, ಜನರ ಆಶೀರ್ವಾದ ಇರುವವರೆಗೂ ನನ್ನನ್ನು ಮುಗಿಸಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ಸಚಿವ ಡಾ.ಅಶ್ವತ್ಥನಾರಾಯಣ ಟಿಪ್ಪೂ ರೀತಿಯಲ್ಲೇ ಸಿದ್ದರಾಮಯ್ಯ ಅವರನ್ನು ಹೊಡೆದುಹಾಕಿ ಎಂದು ಬಹಿರಂಗವಾಗಿ ಹೇಳಿದ್ದರು. ಈ ವಿಚಾರವಾಗಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ನಾವು ಅಧಿಕಾರಕ್ಕೆ ಬಂದರೆ ನಿಮ್ಮೆಲ್ಲರ ಬೇಡಿಕೆ ಈಡೇರಿಸುತ್ತೇವೆ. ಕೊಟ್ಟ ಮಾತಿಗೆ ನಡೆಯದಿದ್ರೆ 1 ಸೆಕೆಂಡ್ ಅಧಿಕಾರದಲ್ಲಿ ಇರೋದಿಲ್ಲ ಎಂದರು. ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ, ಬಿಜೆಪಿ ಸುಳ್ಳಿನ ಕಾರ್ಖಾನೆ. ಬಿಜೆಪಿಯವರು ಅಂದರೆ ಮಾನಗೆಟ್ಟವರು, ಲಜ್ಜೆಗೆಟ್ಟವರು. ಸಿದ್ದರಾಮಯ್ಯರನ್ನು ಮುಗಿಸ್ತೀವಿ ಅಂತಾ ಹೇಳ್ತಾರಲ್ಲ ಇದು ಸರಿನಾ ಎಂದು ಪ್ರಶ್ನಿಸಿದರು.
ರೈತರು, ಬಡವರು, ಯುವಕರು, ಶ್ರಮಿಕರ ಪರ ಹೋರಾಟ ಮಾಡ್ತಿದ್ದೇನೆ. ಇದು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಹರಿಹಾಯ್ದರು. ಬಿಜೆಪಿ ಅಲಿಬಾಬಾ 40 ಕಳ್ಳರು ಅಂತಹ ಸರಕಾರ ಇದು ಎಂದು ಕಿಡಿಕಾರಿದರು.