Thursday, June 8, 2023
spot_img
- Advertisement -spot_img

ಈ ಎಲೆಕ್ಷನ್ ನಲ್ಲಿ ಸಿಟಿ ರವಿ ರಾಜಕೀಯ ಜೀವನ ಅಂತ್ಯವಾಗಲಿದೆ : ಸಿದ್ದರಾಮಯ್ಯ

ಚಿಕ್ಕಮಗಳೂರು: ಸಿಟಿ ರವಿಯ ರಾಜಕೀಯ ಜೀವನ ಈ ಎಲೆಕ್ಷನ್ ನಲ್ಲಿ ಅಂತ್ಯ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಖರಾಯಪಟ್ಟಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಡಿ.ತಮ್ಮಯ್ಯ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಸಿ.ಟಿ.ರವಿ ನನ್ನನ್ನು ಸಿದ್ರಾಮುಲ್ಲಾಖಾನ್‌ ಎಂದು ಕರೆಯುತ್ತಾರೆ. ಹಾಗಿದ್ದರೆ, ನಾನು ಹಿಂದು ಅಲ್ವಾ ? ಶಾಸಕ ಸಿ.ಟಿ.ರವಿಗೆ ನಾಲಿಗೆ ಮೇಲೆ ಹಿಡಿತ ಇಲ್ಲ, ಸಂಸ್ಕೃತಿಯೂ ಇಲ್ಲ, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶಿಸಿದರು.

ಒಳಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಇದು ಶಾಸಕ ಸಿ.ಟಿ.ರವಿ ನಡೆಸಿದ ಅಭಿವೃದ್ದಿ ಕಾರ್ಯವೇ ಎಂದು ಪ್ರಶ್ನಿಸಿದರು. ಮತದಾರರು ಈ ಚುನಾವಣೆಯಲ್ಲಿ ಸಿ.ಟಿ.ರವಿಯವರನ್ನು ಮನೆಗೆ ಕಳುಹಿಸಿ, ಕೈ ಅಭ್ಯರ್ಥಿ ಹೆಚ್ ಡಿ ತಮ್ಮಯ್ಯ ರನ್ನು ವಿಧಾನಸಭೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.

ರವಿ ಎಷ್ಟು ಭ್ರಷ್ಟ ಎಂದು ತಮ್ಮಯ್ಯಗೆ ಗೊತ್ತಿದೆ, ರವಿ ಅವರಂತೆ ಹಿಂದುತ್ವದ ಹೆಸರಿನಲ್ಲಿ ಸಮಾಜ ಒಡೆಯಲ್ಲ ಎಂದರು. ಕೈ ಪ್ರಣಾಳಿಕೆಯಲ್ಲಿ ಅನ್ನ ಭಾಗ್ಯ , ಗೃಹ ಲಕ್ಷ್ಮೀ, ಉಚಿತ ಬಸ್ ಪಾಸ್, ಯುವನಿಧಿ ಗ್ಯಾರಂಟಿ ನೀಡಿದ್ದೇವೆ, ಬಿಜೆಪಿಯನ್ನು ಸೋಲಿಸಬೇಕೆಂಬ ಇಚ್ಛೆ ಇದ್ದರೆ ಮುಸಲ್ಮಾನರು ಜೆಡಿಎಸ್‌ಗೆ ಮತ ಹಾಕಬಾರದು. ಕಾಂಗ್ರೆಸ್‌ಗೆ ಮತ ನೀಡಬೇಕು. ಜೆಡಿಎಸ್‌ಗೆ ಮತ ಹಾಕಿದರೆ ಅದು ಬಿಜೆಪಿಗೆ ಹೋಗುತ್ತದೆ ಎಂದರು.

Related Articles

- Advertisement -spot_img

Latest Articles