ವಿಜಯಪುರ : ಜ್ಞಾನಯೋಗಾಶ್ರಮ ಆವರಣದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರ ಅಂತ್ಯಕ್ರಿಯೆ ನಡೆಯಿತು. ಸಕಲ ಸರ್ಕಾರಿ ಗೌರವದೊಂದಿಗೆ ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ ನೆರವೇರಿತು.
ಜ್ಞಾನಯೋಗಾಶ್ರಮದ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ, ಬಸವಲಿಂಗ ಶ್ರೀ ಸೇರಿದಂತೆ ವಿವಿಧ ಮಠಾಧೀಶರು ಶ್ರೀಗಳ ಇಚ್ಛೆಯಂತೆಯೇ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಸಂಸ್ಕಾರ ನೇರವೇರಿಸಿದ್ರು. ಈ ಮೂಲಕ ಶತಮಾನದ ಸಂತ ಸಿದ್ದೇಶ್ವರ ಸ್ವಾಮೀಜಿ ಪಂಚಭೂತಗಳಲ್ಲಿ ಲೀನರಾದ್ರು
ಶತಮಾನದ ಸಂತನ ಯಾತ್ರೆಯಲ್ಲಿ ಜನ ಕಿಕ್ಕಿರಿದಿದ್ದು, ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ಅಂತ್ಯಕ್ರಿಯೆಯಲ್ಲಿ ಭಕ್ತರಿಗೆ ಎಲ್ಇಡಿ ಸ್ಕ್ರೀನ್ ಮೂಲಕ ನೋಡಲು ಅವಕಾಶ ನೀಡಲಾಗಿತ್ತು. ವಿವಿಐಪಿ, ವಿಐಪಿ, ವಿವಿಧ ಪಠಾಧೀಶರು ಆಗಮಿಸುವ ಹಿನ್ನಲೆ ಬಾರೀ ಭದ್ರತೆ ಕಲ್ಪಿಸಲಾಗಿತ್ತು.
ಸಿದ್ದೇಶ್ವರ ಶ್ರೀಗಳಿದ್ದ ಸಮಯದಲ್ಲಿ ನಾವೆಲ್ಲ ಇದ್ದೇವೆ ಅನ್ನೋದೆ ನಮ್ಮ ಭಾಗ್ಯ. ಮುಂದಿನ ಪೀಳಿಗೆಗೆ ಇಂತಹ ಪುಣ್ಯಾತ್ಮರೊಬ್ಬರು ಈ ಭೂಮಿ ಮೇಲೆ ಇದ್ದರು ಅಂತ ಹೇಳುವಂತಹ ವ್ಯಕ್ತಿ ಅವರಾಗಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.