ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಕುಟುಂಬದ ಮೂರನೇ ಕುಡಿ ರಾಜಕೀಯ ಕ್ಕೆ ಎಂಟ್ರಿಯಾಗಿದೆ.
ಸಿದ್ದರಾಮಯ್ಯನವರ ಎರಡನೇ ಪುತ್ರ ದಿವಂಗತ ರಾಕೇಶ್ ಪತ್ನಿ ಸ್ಮಿತಾ ಹಾಗೂ ಪುತ್ರ ಧವನ್ ರಾಕೇಶ್ ಮೈಸೂರಿನ ಸಿದ್ದರಾಮನಹುಂಡಿ ಆಗಮಿಸಿದ್ದು, ಸಿದ್ದರಾಮಯ್ಯ ಪರ ಪ್ರಚಾರ ಮಾಡಲಿದ್ದಾರೆ. ಈ ಬಗ್ಗೆ ಮಾಧ್ಯಮದವರಿಗೆ ಧವನ್ ರಾಕೇಶ್ ಪ್ರತಿಕ್ರಿಯಿಸಿದ್ದು, ನಮ್ಮ ತಂದೆಗೆ ಎಂಎಲ್ಎ ಕನಸಿತ್ತು. ಆದ್ರೆ ನನಸಾಗಿಲ್ಲ, ನಾನು ಸ್ವ ಇಚ್ಛೆಯಿಂದ ವರುಣಾಗೆ ಬಂದಿದ್ದೇನೆ. ನನ್ನ ತಾತ ನನಗೆ ರಾಜಕಾರಣಕ್ಕೆ ಬರಲು ಸ್ಪೂರ್ತಿ. ಜನರ ಪ್ರೀತಿ ನೋಡಿ ನಾನು ರಾಜಕಾರಣಕ್ಕೆ ಬರಬೇಕು ಅನಿಸಿತು ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ತಾತ, ಚಿಕ್ಕಪ್ಪ ಡಾ ಯತೀಂದ್ರ ಸಿದ್ದರಾಮಯ್ಯ ರಾಜಕೀಯದ ಬಗ್ಗೆ ತಿಳಿಸುತ್ತಾರೆ . ಶಿಕ್ಷಣ ಮುಗಿದ ಮೇಲೆ ಜನರ ಸೇವೆ ಮಾಡು ಎಂದು ತಾತ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಕಾನೂನು ಪದವಿ ಪಡೆದ ನಂತರ ರಾಜಕಾರಣಕ್ಕೆ ಬರುತ್ತೇನೆ. ಅಪ್ಪನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನಾನು ರಾಜಕೀಯದ ಬಗ್ಗೆ ಆಸಕ್ತಿ ವಹಿಸಿರೋದು ಮನೆಯವರಿಗೆ ಖುಷಿ ತಂದಿದೆ ಎಂದರು.