ಚಿತ್ರದುರ್ಗ: ನಳೀನ್ ಕುಮಾರ್ ಕಟೀಲ್‌ರಂತೆ ಜೆ.ಪಿ.ನಡ್ಡಾರಿಗೂ ರಾಜಕೀಯ ಜ್ಞಾನ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ನಾಯಕರು ಸಿದ್ದಾಂತ ಎನೆಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಟಿಪ್ಪು ಸುಲ್ತಾನ್ ಚರ್ಚೆ ಸಿದ್ದಾಂತನಾ ?, ಸಾವರ್ಕರ್- ಗಾಂಧಿ ಚರ್ಚೆ ಸಿದ್ದಾಂತನಾ ?, ಸಿದ್ದರಾಮಯ್ಯ ಅವರನ್ನ ಮುಗಿಸಿ ಎಂಬುದು ಸಿದ್ದಾಂತನಾ? ಇದನ್ನು ತಿಳಿದುಕೊಳ್ಳಬೇಕು ಎಂದು ಕಾಂಗ್ರೆಸ್‌ಗೆ ಸಿದ್ದಾಂತ ಇಲ್ಲ, ಸಿದ್ದರಾಮಯ್ಯ ಕಡು ಭ್ರಷ್ಟರು ಎಂಬ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಬಿಜೆಪಿಗೆ ಜನರ ಪ್ರಚೋದನೆ ಮಾಡಿ, ದ್ವೇಷದ ರಾಜಕಾರಣ ಮಾಡುವುದೇ ಸಿದ್ದಾಂತವಾಗಿದ್ದು, ಮೋದಿ, ಅಮಿತ್ ಶಾ, ನಡ್ಡಾ ಸೇರಿದಂತೆ ಬಿಜೆಪಿ ಯಾವುದೇ ನಾಯಕರು ಕರ್ನಾಟಕಕ್ಕೆ ನೂರು ಬಾರಿ ಬಂದರು ಸಹ ಗೆಲ್ಲೋದಿಲ್ಲ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಪಕ್ಷ ಮನುಷತ್ವದ ರಾಜಕೀಯ ಮಾಡುತ್ತದೆ. ನನ್ನ ಕಾಲದ ಭ್ರಷ್ಟಾಚಾರದ ದಾಖಲೆ ಇದ್ದರೇ ತನಿಖೆ ಮಾಡಿ, 40% ಕಮಿಷನ್ ಕೂಡಾ ತನಿಖೆ ಮಾಡಿ ಯಾಕೆ ಹಿಂದೇಟು ಹೊಡೆಯುತ್ತೀರಿ ಎಂದು ಸವಾಲು ಹಾಕಿದರು.