Wednesday, March 22, 2023
spot_img
- Advertisement -spot_img

ಆರ್ಯರು ಈ ದೇಶದವರೇ? ಅವರು ದ್ರಾವಿಡರೇ? : ಮಾಜಿ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಆರ್ ಎಸ್ ಎಸ್ ನವರು ಆರ್ಯರಾ? ಈ ದೇಶದವರೇ? ಅವರು ದ್ರಾವಿಡರೇ? ನಾವು ಅವರ ಮೂಲಕ್ಕೆ ಹೋಗಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಪಠ್ಯಪುಸ್ತಕಗಳಲ್ಲಿ ಆರ್ ಎಸ್ ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಗೆವಾರ್ ಪಾಠ ಕುರಿತು ಉಂಟಾಗಿರುವ ವಿವಾದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಪುಣ್ಯ ಸ್ಮರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೊಘಲರು 600 ವರ್ಷಗಳ ಕಾಲ ದೇಶವನ್ನಾಳಲು ಯಾರು ಹೊಣೆ ಎಂದು ಪ್ರಶ್ನಿಸಿದರು. ಈ ಆರ್ ಎಸ್ ಎಸ್ ನವರು ಸ್ಥಳೀಯ ಭಾರತೀಯರೇ? ಅನಗತ್ಯವಾಗಿ, ನಾವು ಅದರ ಬಗ್ಗೆ ಚರ್ಚಿಸಲು ಬಯಸುವುದಿಲ್ಲ.

ಒಂದು ವೇಳೆ ನೀವೆಲ್ಲರೂ ಒಗ್ಗಟ್ಟಾಗಿದ್ದರೆ ಮೊಘಲರು ಏಕೆ ಬರುತ್ತಿದ್ದರು, ಅವರಿಗೆ ಜಾಗ ನೀಡಿದವರು ಯಾರು? ಬ್ರಿಟಿಷರು 200 ವರ್ಷಗಳ ಕಾಲ ದೇಶವನ್ನಾಳಲು ಕಾರಣರಾದವರು ಯಾರು? ಇದರ ಬಗ್ಗೆ ಹೆಚ್ಚಿನ ಹೆಚ್ಚು ಮಾತನಾಡಲು ಹೋಗಲ್ಲ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಅವರು ಭಾರತ ಮತ್ತು ಭಾರತೀಯತೆಯನ್ನು ಮೆಕಾಲೆ ದೃಷ್ಟಿಕೋನದಿಂದ ನೋಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ಇನ್ನೂ ಸಿದ್ದರಾಮಯ್ಯ ಜನರ ಕ್ಷಮೆಯಾಚಿಸಬೇಕೆಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದ್ದಾರೆ.

Related Articles

- Advertisement -

Latest Articles