ಮಂಗಳೂರು: ನಳೀನ್ ಕುಮಾರ್ ಕಟೀಲು ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಕಾನೂನು ಜ್ಞಾನ ಇಲ್ಲದೆ ಮಾತನಾಡುತ್ತಾರೆ. ಆ ಕಾರಣದಿಂದ ನನ್ನನ್ನು ಜೈಲಿಗೆ ಕಳುಹಿಸಿಸುತ್ತೇನೆ ಎನ್ನುತ್ತಾರೆ. ಜೈಲಿಗೆ ಕಳುಹಿಸುವ ಕೆಲಸ ನ್ಯಾಯಾಲಯ ಮಾಡುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ನಳಿನ್ ಕುಮಾರ್ ಕಟೀಲು ಒಬ್ಬ ಜೋಕರ್ ಇದ್ದಂತೆ ಹೀಗಾಗಿ ಪ್ರತಿಕ್ರಿಯಿಸೋ ಅಗತ್ಯವಿಲ್ಲ ಎಂದಿದ್ದಾರೆ. ಈ ಬಾರಿ ನಾನು ಹೈಕಮಾಂಡ್ ಹೇಳಿದ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತೇನೆ. ಯಾವ ಕ್ಷೇತ್ರ ಎಂಬುವುದು ಇನ್ನೂ ನಿರ್ಧಾರ ಆಗಿಲ್ಲ , ನಾನು ಸಿಎಂ ಅವರನ್ನು ನಾಯಿ ಅಂತ ಕರೆದಿಲ್ಲ ಆದರೆ ಕೇಂದ್ರದಿಂದ ಅನುದಾನ ತರಲು ಧೈರ್ಯ ಇರಬೇಕು ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನನ್ನು ಟಗರು, ಹುಲಿಯಾ ಎಂದು ಕರೆಯುತ್ತಾರೆ, ಯಡಿಯೂರಪ್ಪರನ್ನು ರಾಜಾ ಹುಲಿ ಎಂದು ಪಕ್ಷದವರೇ ಕರೆಯುತ್ತಾರೆ ಹಾಗಾದರೆ ಯಡಿಯೂರಪ್ಪ ಅವರು ಹುಲಿಯಾ? ಹಾಗೆಯೇ ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡರು.
ರಾಜ್ಯದ ಸಮಸ್ಯೆಗಳ ಬಗ್ಗೆ ಕೇಂದ್ರ ಸರಕಾರದ ಜೊತೆ ಮಾತನಾಡುವ ಧೈರ್ಯ ರಾಜ್ಯದ ಮುಖ್ಯಮಂತ್ರಿಗೆ ಇರಬೇಕು. ರಾಜ್ಯಕ್ಕೆ ಬರಬೇಕಾದ ಅನುದಾನ ತರಬೇಕು, ನಾಯಿಮರಿ ತರ ಇರಬಾರದೆಂದು ಹೇಳಿದ್ದೇನಷ್ಟೇ ಎಂದರು.