ಮೈಸೂರು : ಕೋಲಾರದಲ್ಲಿ ಬಿಜೆಪಿಯವರು ಯಾರೇ ಬಂದೂ ಪ್ರಚಾರ ಮಾಡಿದರೂ, ಎಲೆಕ್ಷನ್ ನಲ್ಲಿ ನಾನು ಗೆ್ಲ್ಲುವುದು ಖಚಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಬಾದಾಮಿ ದೂರ ಎಂಬ ಕಾರಣಕ್ಕೆ ನಾನು ಅಲ್ಲಿಂದ ಸ್ಪರ್ಧೀಸುತ್ತಿಲ್ಲ, ಜನ ಹೆಲಿಕಾಪ್ಟರ್ ಕೊಡುತ್ತೇನೆ ಎಂದಿದ್ದಾರೆ, ಎಲ್ಲದಕ್ಕೂ ಹತ್ತಿರ ಎಂಬ ಕಾರಣಕ್ಕೆ ಕೋಲಾರದಿಂದ ಸ್ಫರ್ಧಿಸುತ್ತಿದ್ದೇನೆ ಎಂದು ಹೇಳಿದರು. ಬಾದಾಮಿಯಲ್ಲಿಯೂ ನನ್ನನ್ನು ಸೋಲಿಸಲು ಅಮಿತ್ ಷಾ ಬಂದಿದ್ದರು, ಬಾದಾಮಿಯಲ್ಲಿ ಎರಡು ದಿನ ಪ್ರವಾಸ ಮಾಡಿದ್ದೆ, ಅಲ್ಲಿ ನನ್ನನ್ನು ಜನರು ಗೆಲ್ಲಿಸಿದ್ದರು ಎಂದು ಹೇಳಿದರು.
ಅಂದಹಾಗೇ ಕೋಲಾರದಿಂದ ಸಿದ್ದರಾಮಯ್ಯ ಚುನಾವಣೆಗೆ ನಿಲ್ಲುತ್ತಾರೆ ಎಂದು ಗೊತ್ತಾದ ಕೂಡಲೇ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಿದ್ದರಾಮಯ್ಯರಿಗೆ ಸೋಲು ಖಚಿತ ಎಂದಿದ್ದರು.
ಕೋಲಾರದಲ್ಲಿ ಚಡ್ಡಿ ಹಾಕೋನ ಕೈಗೂ ಸಿಗ್ತೀನಿ, ರಾಜ್ಯದ ಅಭಿವೃದ್ಧಿ ಕೋಲಾರಕ್ಕೆ ವಿಶೇಷ ಸಾಧ್ಯತೆ ಕೊಡ್ತೀನಿ. ಕೆ.ಸಿವ್ಯಾಲಿ, ಎತ್ತಿನ ಹೊಳೆ, ಮಹದಾಯಿ, ಮೇಕೆದಾಟು ಎಲ್ಲಾ ಯೋಜನೆಗಳನ್ನೂ 2 ವರ್ಷದಲ್ಲಿ ಮುಗಿಸ್ತೀವಿ. ಕೋಲಾರಕ್ಕೆ ಮೊದಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡ್ತೀನಿ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಕೋಲಾರ ಕ್ಷೇತ್ರಕ್ಕೂ ಸಿದ್ದರಾಮಯ್ಯ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ, ಹೀಗಾಗಿ ಎಲ್ಲ ಸಮುದಾಯಗಳು ಸಿದ್ದರಾಮಯ್ಯ ಅವರನ್ನು ಬೆಂಬಲಿಸುವುದಿಲ್ಲ. ಸಿದ್ದರಾಮಯ್ಯ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವಲ್ಲಿ ಎಡವಿದ್ದಾರೆ. ಸಿದ್ದರಾಮಯ್ಯ ಮತದಾರರನ್ನು ಒಲಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ ಹೇಳಿದ್ದರು.