Monday, March 27, 2023
spot_img
- Advertisement -spot_img

ಪ್ರಾಣ ಸ್ನೇಹಿತನ ಅಗಲಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ : ಎಲ್ಲ ಕಾರ್ಯಕ್ರಮ ರದ್ದು

ಮೈಸೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ನಿಧನರಾಗಿದ್ದು, ರಾಜ್ಯ ಒಬ್ಬ ಉತ್ತಮ ನಾಯಕನನ್ನು ಕಳೆದುಕೊಂಡ ದು:ಖದಲ್ಲಿದೆ. ಧ್ರುವನಾರಾಯಣ್ ಇನ್ನಿಲ್ಲ ಎಂಬ ಸುದ್ದಿ ತಿಳಿದ ಮಾಜಿ ಸಿಎಂ ಸಿದ್ದರಾಮಯ್ಯ ನೊಂದಿದ್ದು, ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ.

ಸಿದ್ದರಾಮಯ್ಯ, ಧ್ರುವ ನಾರಾಯಣ್ ರ ಸ್ನೇಹ 30 ವರ್ಷದ್ದು. ಪ್ರಾಣ ಸ್ನೇಹಿತನ ಅಗಲಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಬೇಸರಗೊಂಡಿದ್ದು, ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ರಾಜಕೀಯ ನಾಯಕ ಮತ್ತು ಸಂಸದೀಯ ಪಟುವಾಗಿ ತನ್ನ ಶ್ರಮ, ಪ್ರಬುದ್ದತೆ ಮತ್ತು ಬದ್ಧತೆಯಿಂದ ಅತ್ಯುನ್ನತ ಸ್ಥಾನಕ್ಕೇರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಧ್ರುವನಾರಾಯಣ್ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡದ್ದು ನಾಡಿಗೆ ಮತ್ತು ಜನತೆಗೆ ತುಂಬಲಾರದ ನಷ್ಟ. ಅವರ ಸಾಧನೆಯ ಬದುಕು ಶಾಶ್ವತವಾಗಿ ನಮ್ಮ ನೆನಪಲ್ಲಿರುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಇಂದು ಬೆಳಗ್ಗೆ ಮೈಸೂರಿನ ತಮ್ಮ ನಿವಾಸದಲ್ಲಿ ಧ್ರುವನಾರಾಯಣರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ತೀವ್ರ ರಕ್ತಸ್ರಾವ ವಾಂತಿಯಾಗಿ ಹಠಾತ್ ನಿಧನರಾಗಿದ್ದಾರೆ. ಅಂದಹಾಗೆ ಸುದ್ದಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆಯನ್ನು ರದ್ದುಗೊಳಿಸಿ ಕಾಂಗ್ರೆಸ್ ನಾಯಕರು ಮೈಸೂರಿನತ್ತ ಹೊರಟಿದ್ದಾರೆ. ಸದ್ಯ ಅವರ ನಿವಾಸದಲ್ಲಿ ಮೃತದೇಹ ಇರಿಸಲಾಗಿದ್ದು ವಿಧಿವಿಧಾನಗಳು ನೆರವೇರುತ್ತಿವೆ.

ಧೃವನಾರಾಯಣ ಅವರನ್ನು ದಾಖಲಿಸಲಾಗಿದ್ದ ನಗರದ ಆಸ್ಪತ್ರೆಯೊಂದರ ಮುಂದೆ ನೆರೆದ ಅಭಿಮಾನಿಗಳು ಮತ್ತು ಬೆಂಬಲಿಗರು ಕಣ್ಣೀರಿಡುತ್ತಿದ್ದರು. ವರುಣ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಸಹ ಆಸ್ಪತ್ರೆಗೆ ಧಾವಿಸಿದ್ದರು.

Related Articles

- Advertisement -

Latest Articles