Sunday, March 26, 2023
spot_img
- Advertisement -spot_img

ಕೋಟ್ಯಧಿಪತಿಯಾಗಿದ್ರೂ BPL ಕಾರ್ಡ್‌ ಹೊಂದಿದ್ದ ಜೆಡಿಎಸ್‌ ನಾಯಕನ ನಗರ ಸಭೆ ಸದಸ್ಯತ್ವ ರದ್ದು..!

ತುಮಕೂರು: ಶಿರಾ ನಗರ ಸಭೆಯ ಜೆಡಿಎಸ್ ಸದಸ್ಯ ರವಿಶಂಕರ್ ಸದಸ್ಯತ್ವವನ್ನ ಶಿರಾ ಜೆಎಂಎಫ್‌ಸಿ ನ್ಯಾಯಾಲಯ ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಅಪರಾಧ ಕೃತ್ಯದ ಮಾಹಿತಿಯನ್ನು ಉಲ್ಲೇಖಿಸದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್‌ ರವಿಶಂಕರ್‌ ಸದಸ್ಯತ್ವವನ್ನ ಅಸಿಂಧುಗೊಳಿಸಿದೆ.

ರವಿಶಂಕರ್ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಚೆಕ್ ಬೌನ್ಸ್, ಕೋಮು ಗಲಭೆ ಸೃಷ್ಟಿ, ಅಪಘಾತ ಪ್ರಕರಣ‌‌ಗಳು ರವಿಶಂಕರ್‌ ಮೇಲೆ ದಾಖಲಾಗಿತ್ತು. ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಮೇಲೆ ದಾಖಲಾಗಿರುವ ಎಲ್ಲಾ ಪ್ರಕರಣಗಳ ವಿವರಗಳನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸಿ ಚುನಾವಣಾ ಆಯೋಗಕ್ಕೆ ಮಾಹಿತಿ ಕೊಡಬೇಕು. ರವಿಶಂಕರ್ ಈ‌ ಎಲ್ಲಾ ಮಾಹಿತಿಗಳನ್ನು ನೀಡದೇ ಮುಚ್ಚಿಟ್ಟಿದ್ದರು. ಈ ಕಾರಣಕ್ಕೆ ಶಿರಾ ಜೆಎಂಎಫ್‌ಸಿ ಕೋರ್ಟ್‌ನ ನ್ಯಾ. ಗೀತಾಂಜಲಿ ಅವರು ವಾರ್ಡ್ ನಂಬರ್ 9 ರಿಂದ ಆಯ್ಕೆಯಾದ ರವಿಶಂಕರ್ ಸದಸ್ಯತ್ವ ರದ್ದುಗೊಳಿಸಿ ಉಪ ಚುನಾವಣೆ ನಡೆಸುವಂತೆ ಆದೇಶಿಸಿದ್ದಾರೆ.

ರವಿಶಂಕರ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ನಾಮಪತ್ರದಲ್ಲಿ ತನ್ನ ಬಳಿ 4 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಎಂದು ಉಲ್ಲೇಖಿಸಿದ್ದರು. ಕೋಟಿಗಟ್ಟಲೇ ಆಸ್ತಿ ಇದ್ದರೂ ಬಿಪಿಎಲ್ ಕಾರ್ಡ್ ಪಡೆದು ಸರ್ಕಾರದ ಉಚಿತ ರೇಷನ್‌ ಪಡೆಯುತ್ತಿದ್ದರು. ಈ ಮಾಹಿತಿ ತಿಳಿದಿದ್ದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಕೋರ್ಟ್ ಮೆಟ್ಟಿಲೇರಿದ್ದರು. ರವಿಶಂಕರ್ ನಾಮಪತ್ರದಲ್ಲಿ ಸುಳ್ಳು‌ಮಾಹಿತಿ ನೀಡಿದ್ದಾರೆ. 2021ರ ಡಿಸೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ರವಿಶಂಕರ್ ಸದಸ್ಯತ್ವ ಅನೂರ್ಜಿತಗೊಳಿಸಬೇಕು ಎಂದು ಮನವಿ ಮಾಡಿದ್ದರು.

Related Articles

- Advertisement -

Latest Articles