ಯಾದಗಿರಿ: ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿಗೆ ಕೆಲವು ನಾಯಕರು ಬರಲಿದ್ದಾರೆ ಎಂದು ಎಮ್ಎಲ್ಸಿ ರವಿಕುಮಾರ್ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿ, ಈಗಾಗಲೇ ಕಾಂಗ್ರೆಸ್ ಗೆ ಕೆಲವು ಬಿಜೆಪಿ ನಾಯಕರು ಸೇರಿದ್ದು, ಮುಂದೆಯೂ ಸೇರ್ಪಡೆ ಆಗಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಪದೇ ಪದೇ ಹೇಳುತ್ತಿರುತ್ತಾರೆ.
ಕಾಂಗ್ರೆಸ್ ಪಕ್ಷಕ್ಕೆ ಯಾವ ನಾಯಕರು ಬಂದು ಸೇರಿದ್ದಾರೆ ಹೇಳಲಿ ಎಂದು ಕೇಳಿದ್ದಾರೆ. ಬಿಜೆಪಿಗೆ ಇನ್ನೂ ಹಲವರು ಸೇರಲಿದ್ದು, ಸಮಯ ಸಂದರ್ಭ ಬಂದಾಗ ಎಲ್ಲ ವಿಚಾರ ನಾನೇ ತಿಳಿಸುತ್ತೇನೆ ಎಂದರು. ಬಿಜೆಪಿಗೆ ಸುಮಲತಾ ಸೇರ್ಪಡೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಎಂದು ಎರಡು ರಾಷ್ಟ್ರೀಯ ಪಕ್ಷಗಳನ್ನ ಆಯ್ಕೆಯಲ್ಲಿ ಇಟ್ಟುಕೊಂಡಿದ್ದಾರೆ. ಅವರು ಯಾವ ಪಕ್ಷಕ್ಕೆ ಸೇರ್ತಾರೋ ಅದು ಅವರ ಇಷ್ಟ. ಒಂದು ವೇಳೆ ನಮ್ಮ ಪಕ್ಷಕ್ಕೆ ಬಂದ್ರೆ ಒಳ್ಳೆಯದೇ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಗೆ ಸೋಮಣ್ಣ ಹೋಗೋ ಪ್ರಶ್ನೆ ಇಲ್ಲ , ಸೋಮಣ್ಣ ನಾವು ಸೇರಿ ಕಾಂಗ್ರೆಸ್ನ್ನು ಮನೆಗೆ ಕಳುಹಿಸುವುದು ಗ್ಯಾರಂಟಿ , ಕಾಂಗ್ರೆಸ್ ನವರು ಸೋಲಿನ ಭೀತಿಯಲ್ಲಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.