ಮುಂಬೈ: ಖ್ಯಾತ ಗಾಯಕ ಸೋನು ನಿಗಮ್ ಮತ್ತು ತಂಡದವರ ಮೇಲೆ ಮುಂಬೈಯ ಚೇಬೂರು ಎಂಬಲ್ಲಿ ಪ್ರೋಗ್ರಾಂ ನಡೆಯುತ್ತಿದ್ದಾಗ ಹಲ್ಲೆ ನಡೆದಿದೆ. ಚೆಂಬೂರು ಉತ್ಸವದಲ್ಲಿ ಸೋನು ನಿಗಮ್ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು ಈ ವೇಳೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಗುಂಪಾಗಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಶಿವಸೇನಾ ಪಕ್ಷದ ನಾಯಕ ಪ್ರಕಾಶ್ ಫಾಟರ್‌ಪೇಕರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೋನು ನಿಗಮ್ ಚೆಂಬೂರ್‌ಗೆ ಬಂದಿದ್ದರು. ಅವರು ಕಾರ್ಯಕ್ರಮ ಮುಗಿಸಿ ಕೆಳಗೆ ಇಳಿಯುತ್ತಿದ್ದಂತೆ ಜನರು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಆಗ ಪ್ರಕಾಶ್ ಪರ್ತೇಫೇಕರ್ ಮಗ ಸ್ವಪ್ನಿಲ್ ಫರ್ತೇಫೇಕರ್ ನನ್ನನ್ನು ತಳ್ಳಿದ್ದಾರೆ ಆ ವೇಳೆ ಹರಿ, ರಬ್ಬನಿ ಅವರು ನನ್ನನ್ನು ತಳ್ಳಿದರು. ಆಮೇಲೆ ನಾನು ಮೆಟ್ಟಿಲಿನಿಂದ ಕೆಳಗಡೆ ಬಿದ್ದೆ. ಆ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇನೆ. ಆಕ್ರಮಣ ಮಾಡುವ ರೀತಿಯಲ್ಲಿ ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಂದಿದ್ದರು ಎಂದು ಗಾಯಕ ಸೋನು ನಿಗಮ್ ಪ್ರತಿಕ್ರಿಯಿಸಿದ್ದಾರೆ.
ಘಟನೆ ಸಂಬಂಧ ವಿಡಿಯೋ ವೈರಲ್ ಆಗಿದ್ದು, ಈ ಸಂಪೂರ್ಣ ಘಟನೆಯಿಂದ ಸೋನು ನಿಗಮ್ ಆಘಾತಕ್ಕೆ ಒಳಗಾಗಿದ್ದಾರೆ. ಸೋನು ನಿಗಮ್ ಅವರ ತಂಡದ ಮ್ಯಾನೇಜರ್ ಸಾಯಿರಾ ಅವರ ಜೊತೆ ಶಿವಸೇನಾ ಶಾಸಕ ಪ್ರಕಾಶ್ ಫಾಟರ್‌ಪೇಕರ್ ಪುತ್ರ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಹೇಳಲಾಗಿದ್ದು, ಈ ವೇಳೆ ಆತನನ್ನು ವೇದಿಕೆಯಿಂದ ಹೊರಗೆ ಹೋಗುವಂತೆ ಸೋನು ನಿಗಮ್ ಸೂಚಿಸಿದ್ದಾರೆ , ಹೀಗಾಗಿ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.