ಕಿತ್ತೂರು: ದೇಶದಲ್ಲಿ ಶೀಘ್ರವೇ ಹಿಟ್ಲರ್ ಆಡಳಿತ ಬರಲಿದೆ ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ದೇಶದಲ್ಲಿ ಹಿಟ್ಲರ್ ಪದ್ಧತಿ ಶೀಘ್ರದಲ್ಲೇ ಬರುವುದರಲ್ಲಿ ಸಂಶಯವಿಲ್ಲ, ಯಾರಾದ್ರೂ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡಿದ್ರೆ ಜೈಲಿಗೆ ಹಾಕ್ತಾರೆ , ರಾಜ್ಯ ಸರ್ಕಾರ ಟ್ಯಾಕ್ಸ್ ಪೇ ಮಾಡುವುದರಲ್ಲಿ ದೇಶದಲ್ಲಿಯೇ 2 ನೇ ಸ್ಥಾನದಲ್ಲಿದೆ. ಆದ್ರೆ ಕೇಂದ್ರದಿಂದ ನಮಗೆ ಬರುವ ಅನುದಾನ 0 ಆಗಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ : ಜಗದೀಶ್ ಶೆಟ್ಟರ್‌ಗೆ ಅಮಿತ್ ಶಾ ದೂರವಾಣಿ ಕರೆ; ಮತ್ತೆ ಬಿಜೆಪಿ ಸೇರ್ತಾರಾ ಮಾಜಿ ಸಿಎಂ?
ನಾವು ದುಡ್ಡು ಕೊಡ್ತೇವೆ ಅಂದ್ರು ನಮಗೆ ಅಕ್ಕಿಕೊಡಲಿಕ್ಕೆ ಆಗ್ತಿಲ್ಲ , ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ 1300 ಮನೆಗಳು ಬಿದ್ದಿವೆ. ಬಹಳಷ್ಟು ಮಂದಿ ಗುಡಿಸಲು ಹಾಗೂ ದೇವಸ್ಥಾನ ಅಂಗನವಾಡಿಗಳಲ್ಲಿ ವಾಸವಾಗಿದ್ದಾರೆ. ಈ ಬಗ್ಗೆ ಸದನದಲ್ಲಿ ಮಾತನಾಡಿರುವೆ, ಅವರಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ರಿಸರ್ವೇ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.