ನವದೆಹಲಿ : ದಕ್ಷಿಣ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಅವರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಶೃಂಗಸಭೆಯಲ್ಲಿ ಭಾಗಿವಹಿಸಲು ರಷ್ಯಾಗೆ ತೆರಳಿದ್ದಾರೆ. ಕಿಮ್ ಜೊಂಗ್ ಉನ್ ಅವರು ಐಷಾರಾಮಿಯಾಗಿ ಅಲಂಕರಿಸಿದ, ಹೆಚ್ಚು ಶಸ್ತ್ರಸಜ್ಜಿತ ಮತ್ತು ನಿಧಾನವಾಗಿ ಚಲಿಸುವ ಖಾಸಗಿ ರೈಲಿನಲ್ಲಿ ಪ್ರಯಾಣಿಸಿದ್ದಾರೆ.
ಅವರೊಂದಿಗೆ ಇತರ ರಾಜತಾಂತ್ರಿಕರು ಮತ್ತು ಮಿಲಿಟರಿ ಕಮಾಂಡರ್‌ಗಳ ನಡುವೆ ಉನ್ನತ ಶಸ್ತ್ರಾಸ್ತ್ರದ ವ್ಯವಹಾರವನ್ನು ನೋಡಿಕೊಳ್ಳುತ್ತಿರುವ ಅಧಿಕಾರಿಗಳೂ ಸಹ ಪ್ರಯಾಣ ಬೆಳೆಸಿದ್ದಾರೆ. ವರದಿಗಳ ಪ್ರಕಾರ, ಕಿಮ್ ಜಾಂಗ್ ಉನ್ ಅವರ ರೈಲು ಎಷ್ಟು ಭಾರವಾಗಿದೆಯೆಂದರೆ ಅದು ಗಂಟೆಗೆ 59 ಕಿಮೀ ಗಿಂತ ಹೆಚ್ಚು ವೇಗವಾಗಿ ಚಲಿಸಲು ಸಾಧ್ಯವಾಗುವುದಿಲ್ಲ. ಲಂಡನ್‌ನ ಹೈಸ್ಪೀಡ್ ರೈಲು ಗಂಟೆಗೆ 200 ಕಿಮೀ ವೇಗದಲ್ಲಿ ಚಲಿಸುತ್ತದೆ. ಜಪಾನ್‌ನ ಶಿಂಕನ್‌ಸೆನ್ ಬುಲೆಟ್ ರೈಲುಗಳಿಗೆ ಹೋಲಿಸಿದರೆ ಇದು ಗಂಟೆಗೆ 320 ಕಿಮೀವರೆಗೂ ಚಲಿಸಬಹುದೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ‘ದೆಹಲಿ ಘೋಷಣೆ’ಗಳ ಪ್ರತಿ ಪದಗಳಿಗೂ ಜಿ20 ದೇಶಗಳು ಸಹಮತಿಸಿವೆ: ಬಿಜೆಪಿ
ಕಿಮ್ ಜಾಂಗ್ ಉನ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿಯಾಗಿರುವುದು, ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧದ ದೃಷ್ಟಿಯಿಂದ ರಷ್ಯಾದೊಂದಿಗೆ ಸಂಭವನೀಯ ಶಸ್ತ್ರಾಸ್ತ್ರ ಒಪ್ಪಂದದ ಬಗ್ಗೆ ಪಾಶ್ಚಿಮಾತ್ಯ ದೇಶಗಳು ಕಳವಳ ವ್ಯಕ್ತಪಡಿಸಿವೆ.
ಆದರೆ ಈ ಭೇಟಿಯು ಪೂರ್ಣ ಪ್ರಮಾಣದ ಭೇಟಿಯಾಗಲಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಉಭಯ ನಾಯಕರ ನಡುವಣ ಮಾತುಕತೆಗಳ ಮುಖ್ಯ ವಿಷಯವೆಂದರೆ ನೆರೆಯ ದೇಶಗಳ ನಡುವಿನ ಸಂಬಂಧಗಳನ್ನು ಸದೃಢವಾಗಿಸುವುದಾಗಿದೆ. ನಾವು ನಮ್ಮ ಸ್ನೇಹವನ್ನು ಗಟ್ಟಿಗೊಳಿಸುವುದನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಮಾಸ್ಕೋ ಮತ್ತು ಪ್ಯೊಂಗ್ಯಾಂಗ್ ಗಳಲ್ಲಿ ಶಸ್ತ್ರಾಸ್ತ್ರ ಒಪ್ಪಂದಗಳನ್ನು ನಡೆಸಿದ್ದಾರೆ ಎಂಬ ಅಮೇರಿಕಾದ ಆರೋಪಗಳನ್ನು ನಿರಾಕರಿಸಿರುವ ಅವರು, ಎರಡು ದೇಶಗಳು ರಕ್ಷಣಾ ಸಂಬಂಧಗಳನ್ನು ಹೆಚ್ಚಿಸಲು ಪ್ರತಿಜ್ಞೆ ಮಾಡಿವೆ ಎಂದು ತಿಳಿಸಿದ್ದಾರೆ.
ಕುಟುಂಬಸ್ಥರ ಮಾತಿನಂತೆ ರೈಲು ಪ್ರಯಾಣದ ಮೊರೆ ಹೋದ ಕಿಮ್‌ಜಾಂಗ್ ಉನ್..
ಕಿಮ್ ಜಾಂಗ್ ಉನ್ ಅವರ ತಂದೆ ಕಿಮ್ ಜೊಂಗ್ ಇಲ್ ಮತ್ತು ಅವರ ಅಜ್ಜ ಕಿಮ್ ಇಲ್ ಸುಂಗ್ ಇಬ್ಬರೂ ವಿಮಾನದಲ್ಲಿ ಹಾರಾಟಕ್ಕೆ ಹೆದರುತ್ತಿದ್ದರು. ಕಿಮ್ ಜೊಂಗ್ ಇಲ್ ಮತ್ತು ಕಿಮ್ ಇಲ್ ಸುಂಗ್ ಅವರು ಪರೀಕ್ಷಾರ್ಥ ಹಾರಾಟದ ಸಮಯದಲ್ಲಿ ತಮ್ಮ ಜೆಟ್ ಸ್ಫೋಟಗೊಂಡಿತ್ತು. ಅದರಿಂದ ಕಿಮ್ ಜಾಂಗ್ ಉನ್ ಅವರಿಗೆ ಭಯ ಹುಟ್ಟಿಕೊಂಡಿರಬಹುದು ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ಈ ಹಿಂದೆ ಹೇಳಿಕೊಂಡಿದ್ದವು.
ಆ ಘಟನೆಯ ನಂತರ ಕಿಮ್ ಇಲ್ ಸುಂಗ್ ಸೋವಿಯತ್ ಒಕ್ಕೂಟಕ್ಕೆ 1986 ರಲ್ಲಿ ವಿಮಾನ ಪ್ರಯಾಣ ನಡೆಸಿದ್ದೇ, ದಕ್ಷಿಣ ಕೊರಿಯಾದ ನಾಯಕರೊಬ್ಬರ ಮೂರು ದಶಕಗಳಿಗೂ ಹೆಚ್ಚು ಕಾಲದ ಸಾರ್ವಜನಿಕ ಕೊನೆಯ ವಿದೇಶ ಪ್ರಯಾಣವಾಗಿದೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ.
ಆದಾಗ್ಯೂ, ಕಿಮ್ ಜಾಂಗ್ ಉನ್ ಅವರು ಸ್ವಿಟ್ಜರ್ಲೆಂಡ್‌ನಲ್ಲಿನ ಬೋರ್ಡಿಂಗ್ ಶಾಲೆಯ ದಿನಗಳಲ್ಲಿ ಆಗಾಗ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ.
ಆದರೆ 2011 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಅವರು ಸಾಂದರ್ಭಿಕವಾಗಿ 2018 ರಲ್ಲಿ ಸಿಂಗಾಪುರಕ್ಕೆ ಆಗಿನ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮೊದಲ ಭೇಟಿಗಾಗಿ ವಿಮಾನವನ್ನು ಬಳಸಿದ್ದರು.
ವಿಮಾನ ಬಿಟ್ಟು ರೈಲಿನಲ್ಲಿ ಪ್ರಯಾಣಿಸುವ ಇವರು ಕುಟುಂಬಸ್ಥರ ಮಾತನ್ನು ಹಾಗೂ ಸಂಪ್ರದಾಯವನ್ನು ಪಾಲಿಸುವುದರ ಜೊತೆಗೆ ಹಿರಿಯರಿಗೆ ಗೌರವ ನೀಡುವ ಹಿನ್ನೆಲೆಯಲ್ಲಿ ರೈಲಿನ ಮೊರೆ ಹೋಗುತ್ತಾರೆ ಎಂದು ಹಲವರ ನಂಬಿಕೆಯಾಗಿದೆ.
ಮಿಲಿಟರಿ ಪಡೆಗಳು ಗೌರವ ನೀಡುತ್ತಿರುವುದು ಹಾಗೂ ಸಿಬ್ಬಂದಿಗಳು ಕಪ್ಪು ಸೂಟ್‌ಗಳು ಮತ್ತು ವರ್ಣರಂಜಿತ ಉಡುಪುಗಳನ್ನು ಧರಿಸಿ, ಜನರು ಅವರ ಮೇಲೆ ಹೂಗಳನ್ನು ಸುರಿಸಿ, ಧ್ವಜಗಳನ್ನು ಪ್ರದರ್ಶಿಸುತ್ತಿರುವುದು ಅಲ್ಲಿನ ಸ್ಥಳೀಯ ಮಾಧ್ಯಮಗಳು ಬಿಡುಗಡೆ ಮಾಡಿದ ಫೋಟೋಗಳಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ : ನಾನೂ ಬಿಜೆಪಿ ರಾಜ್ಯಾದ್ಯಕ್ಷ ಸ್ಥಾನದ ಆಕಾಂಕ್ಷಿ : ರಾಜುಗೌಡ
ಕಿಮ್ ಜಾಂಗ್ ಉನ್ ಪ್ರಯಾಣಿಸುವ ರೈಲು ಅತ್ಯಂತ ಶಸ್ತ್ರ ಸಜ್ಜಿತವಾಗಿದೆ, ಮತ್ತು ಇತರ ವಿಶೇಷ ಉಪಕರಣಗಳನ್ನು ಹೊಂದಿದೆ ಎನ್ನಲಾಗುತ್ತಿದೆ. ಕಿಮ್ ಜಾಂಗ್ ಉನ್ ಅವರ ತಂದೆ ಮತ್ತು ಅಜ್ಜ ಬಳಸುತ್ತಿದ್ದ ರೈಲಿನಲ್ಲಿ 21 ಬುಲೆಟ್ ಪ್ರೂಫ್ ಗಾಡಿಗಳಿವೆ, ಜೊತೆಗೆ ಬೆಲೆಬಾಳುವ ಚರ್ಮದ ಸೋಫಾಗಳು ಮತ್ತು ಕಾನ್ಫರೆನ್ಸ್ ಕೊಠಡಿಗಳಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ವಿಮಾನಕ್ಕಿಂತ ರೈಲಿನಲ್ಲಿದೆ ಹೆಚ್ಚಿನ ಐಷಾರಾಮಿ ಹಾಗೂ ಭದ್ರತೆ..
ಕಿಮ್ ಜಾಂಗ್ ಉನ್ ಬಹುಶಃ ಶಸ್ತ್ರಸಜ್ಜಿತ ರೈಲು ವಿಮಾನಕ್ಕಿಂತ ಹೆಚ್ಚಿನ ಭದ್ರತೆ ಮತ್ತು ಐಷಾರಾಮಿಗಳನ್ನು ಒದಗಿಸುತ್ತದೆ ಎಂದು ನಂಬುತ್ತಾರೆ.
ಎರಡು ಪ್ರತ್ಯೇಕ ರೈಲುಗಳು ಮುಖ್ಯವಾದ ಭದ್ರತಾ ಪಡೆಗಳೊಂದಿಗೆ ಹಾಗೂ ಸಾಧನಗಳೊಂದಿಗೆ ಕಿಮ್ ಅವರೊಂದಿಗೆ ಪ್ರಯಾಣಿಸುತ್ತವೆ ಎಂದು ಚೋಸುನ್ ಮೀಡಿಯಾ ತಿಳಿಸಿದೆ. ಅಲ್ಲದೆ ರೈಲ್ವೆ ಹಳಿಗಳು ಸುರಕ್ಷಿತವಾಗಿವೆ ಎಂದು ಖಚಿತಪಡಿಸಿಕೊಳ್ಳಲು ಮುಂಭಾಗದಲ್ಲಿರುವವರು ಭದ್ರತಾ ತಪಾಸಣೆ ತಂಡ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ. ಅಲ್ಲದೆ ಹಿಂದೆ ಅಂಗರಕ್ಷಕ ಸಿಬ್ಬಂದಿಯನ್ನು ತಮ್ಮ ಜೊತೆಗೆ ವಿಶೇಷ ರೈಲನ್ನು ಕರೆದೊಯಗಯುತ್ತಾರೆ.
ವಿಮಾನದಲ್ಲಿ ಇತರ ಐಷಾರಾಮಿಗಳಿದ್ದರೂ, ದಕ್ಷಿಣ ಕೊರಿಯಾದ ನಾಯಕನ ರೈಲಿನಲ್ಲಿ ಪ್ರಯಾಣದ ವಿವರವು ರಷ್ಯಾದ ಅಧಿಕಾರಿ ಕಾನ್ಸ್ಟಾಂಟಿನ್ ಪುಲಿಕೋವ್ಸ್ಕಿ ಅವರಿಂದ ಹೊರ ಬಂದಿದೆ. ಅವರು “ಓರಿಯಂಟ್ ಎಕ್ಸ್‌ಪ್ರೆಸ್” ಎಂಬ ಪುಸ್ತಕದಲ್ಲಿ ಕಿಮ್ ಜೊಂಗ್ ಇಲ್ ಅವರೊಂದಿಗೆ ರಷ್ಯಾದ ಪೂರ್ವದಾದ್ಯಂತ ಕೈಗೊಂಡ ಪ್ರವಾಸವನ್ನು ವಿವರಿಸಿದ್ದಾರೆ. ಪುಲಿಕೋವ್ಸ್ಕಿಯ ಪುಸ್ತಕವು ವಿವಿಧ ರೀತಿಯ ಆಹಾರದೊಂದಿಗೆ ಮೆನುವನ್ನು ವಿವರಿಸಿದೆ.
ಕಿಮ್ ಜಾಂಗ್ ಉನ್ ರೈಲಿನಿಂದ ಇಳಿಯುವ ಮುನ್ನ ಭದ್ರತಾ ದೃಷ್ಠಿಯಿಂದ ದಾಳಿಯ ಸಾಧ್ಯತೆಯನ್ನು ಅರಿತು ಸುಮಾರು 100 ಭದ್ರತಾ ಏಜೆಂಟರನ್ನು ನಿಲ್ದಾಣಗಳಿಗೆ ಕಳುಹಿಸಲಾಗುತ್ತದೆ. ಆ ಸಮಯದಲ್ಲಿ ಇತರ ರೈಲುಗಳು ಚಲಿಸದಂತೆ ತಡೆಯಲು ನಿಲ್ದಾಣಗಳಲ್ಲಿ ವಿದ್ಯುತ್ ಅನ್ನು ಆಫ್ ಮಾಡಲಾಗುತ್ತದೆ. ಸೋವಿಯತ್ ನಿರ್ಮಿತ ಐ1-76 ವಾಯುಪಡೆಯ ಸಾರಿಗೆ ವಿಮಾನಗಳು ಮತ್ತು ಎಂಐ-17 ಹೆಲಿಕಾಪ್ಟರ್‌ಗಳನ್ನು ಒಳಗೊಂಡಿರುವ ದೊಡ್ಡ ಲಾಜಿಸ್ಟಿಕಲ್ ಗುಂಪು ಕೂಡ ಇರುತ್ತದೆ ಎಂದು ವರದಿ ತಿಳಿಸಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.