ಬಳ್ಳಾರಿ : ರಾಮನಿಗೆ , ವಾಲ್ಮೀಕಿಗಳಿಗೆ ನ್ಯಾಯ ಕೊಟ್ಟ ಪಕ್ಷ ಬಿಜೆಪಿ, ಮುಂದೆ ಲಂಕಾದಹನ ಮಾಬೇಕಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು.
ನವಶಕ್ತಿ ಸಮಾವೇಶದಲ್ಲಿ ಮಾತನಾಡಿ, ಮೀಸಲಾತಿ ನಾವು ಕೊಟ್ಟಿದ್ದೇವೆ ಎಂದು ಕಾಂಗ್ರೆಸ್ನವರು ಹೇಳ್ತಾ ಇದ್ದಾರೆ ಆದರೆ ನುಡಿದಂತೆ ನಡೆದ ಸರ್ಕಾರ ಬಿಜೆಪಿ.. ಶ್ರೀರಾಮುಲು ಬೇಡರ ಕುಲದಲ್ಲಿ ಹುಟ್ಟಿರಬಹುದು ಆದರೆ ಎಲ್ಲರೂ ಜನರು ನನ್ನನ್ನು ಮಗ ಎಂದು ಸ್ವೀಕರಿಸಿದ್ದಾರೆ ಎಂದರು.
ನಾವು ಮೀಸಲಾತಿ ಜಾಸ್ತಿ ಮಾಡ್ತೇವೆ, ತಾಕತ್ತಿದ್ದರೆ ನಮ್ಮನ್ನು ತಡೀರಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಬೇರು ಸಮೇತ ಕಿತ್ತು ಹಾಕುತ್ತಾರೆ ಜನರು.. ಭಕ್ತಿಗೆ ಕಣ್ಣು ಕಿತ್ತು ಕೊಟ್ಟ ಸಮುದಾಯ ವಾಲ್ಮೀಕಿ ಸಮುದಾಯ ಬಿಜೆಪಿ ಬೆನ್ನಿಗೆ ಇಡೀ ಸಮುದಾಯ ನಿಲ್ಲಲಿದೆ ಎಂದರು.
ನಮ್ಮ ಪಕ್ಷ, ನಮ್ಮ ಸಿಎಂ ಯಾವ ರೀತಿ ನ್ಯಾಯ ಕೊಟ್ಟಿದ್ದಾರೆ ಎನ್ನುವುದಕ್ಕೆ ಜನಶಕ್ತಿಯೇ ಸಾಕ್ಷಿ ಎಂದರು. ಕಾಂಗ್ರೆಸ್ ಪಕ್ಷವನ್ನು ಪತನ ಮಾಡಲು ಈ ಸಮಾವೇಶದಿಂದಲೇ ಆರಂಭಿಸಬೇಕಿದೆ ಇದೊಂದು ಸಮಾವೇಶ ಮಾತ್ರವಲ್ಲ, ಸಾಧನ ಸಮಾವೇಶವಾಗಿದೆ.. ಸಿಎಂ ಬಸವರಾಜ ಬೊಮ್ಮಾಯಿ ದಕ್ಷಿಣದ ವಾಜಪೇಯಿ ಆಗಿದ್ದಾರೆ ಎಂದರು.