ಚಿತ್ರದುರ್ಗ: ಭಾರತ ಕ್ರಿಕೆಟ್ ತಂಡಕ್ಕೆ ಮಹೇಂದ್ರಸಿಂಗ್ ದೋನಿ ಕ್ಯಾಪ್ಟನ್ ಆಗಿದ್ದರು. ಬಳಿಕ ರೋಹಿತ್ ಈ ಜವಾಬ್ದಾರಿಯನ್ನು ವಹಿಸಿಕೊಂಡರು. ಇದರಂತೆ ಬಿಜೆಪಿ ಪಕ್ಷದ ನಾಯಕತ್ವವನ್ನು ಬಿ.ವೈ ವಿಜಯೇಂದ್ರ ವಹಿಸಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೂತನ ಅಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರಿಗೆ ನಾಳೆ ಅಭಿನಂದನೆ ಸಲ್ಲಿಕೆ ಮಾಡುತ್ತೇವೆ. ರಾಜ್ಯ ಚುನಾವಣೆ ಸೋತ ಬಳಿಕ ವಿಜಯೇಂದ್ರ ಅವರಿಗೆ ಪಕ್ಷ ಅವಕಾಶ ನೀಡಿದೆ. 30 ವರ್ಷಗಳಿಂದ ನಾನು ವಿಜಯೇಂದ್ರ ಅವರನ್ನು ನೋಡಿದ್ದೇನೆ. ಯುವಕರಿಗೆ ಭವಿಷ್ಯದಲ್ಲಿ ಅವಕಾಶ ಸಿಗಬೇಕು. ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಗ ಎಂದು ಜವಬ್ದಾರಿ ಕೊಟ್ಟಿಲ್ಲ. ಹಂತ ಹಂತವಾಗಿ ಪಕ್ಷದಲ್ಲಿ ಅವರ ಕೆಲಸ ಗುರುತಿಸಿ ಅವಕಾಶ ನೀಡಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಬಿಎಸ್‌ವೈ ಪುತ್ರನಿಗೆ ಪಟ್ಟಾಭಿಷೇಕ: ಮೈತ್ರಿ ದಾಳ..ಮತ್ತೆ ಅಧಿಕಾರದ ಪಣತೊಟ್ಟ ಹೈಕಮಾಂಡ್!
ವಿಜಯೇಂದ್ರ ಅವರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶ ಇದೆ. ಪಕ್ಷ ಅವರಿಗೆ ಜವಾಬ್ದಾರಿ ನೀಡಿದ್ದು, ಅವರಿಗೆ ಶುಭವಾಗಲಿ. ಕಾಂಗ್ರೆಸ್ ನಾಯಕರು ಲೋಕಸಭಾ ಎಲೆಕ್ಷನ್ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸುತ್ತೇವೆ ಎಂದಿದ್ದಾರೆ. ಈ ಬಗ್ಗೆ ಡಿಕೆಶಿ ಅವರು ಹಗಲು ಗನಸು ಕಾಣುತ್ತಿದ್ದಾರೆ. ಇನ್ನು ನಾಲ್ಕೈದು ತಿಂಗಳಲ್ಲಿ ಅಸಲಿ ಬಣ್ಣ ಜನರಿಗೆ ತಿಳಿಯಲಿದೆ. ನಮ್ಮ ಪಕ್ಷ 4/5 ತಿಂಗಳಲ್ಲಿ ಅಸಲಿ ದರ್ಶನ ಮಾಡಿಸಲಿದೆ ಎಂದು ಕಾಂಗ್ರೆಸ್ ಗೆ ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಕೊಟ್ಟ ಕಾರಣದಿಂದ ನಮ್ಮ ಪಕ್ಷಕ್ಕೆ ಸೋಲಾಗಿದೆ. ಲೋಕಸಭೆ ಚುನಾವಣೆ ಆ ರೀತಿ ಆಗುವುದಿಲ್ಲ. ರಾಜ್ಯದಿಂದ ದೊಡ್ಡ ಶಕ್ತಿಯಾಗಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸುತ್ತೇವೆ. ರಾಜಕಾರಣದಲ್ಲಿ ಕೆಲವೊಮ್ಮೆ ಮನುಷ್ಯನ ವರ್ಚಸ್ಸಿನ ಮೇಲೆ ಕುರ್ಚಿಗೆ ಬೆಲೆ ಜಾಸ್ತಿ. ಇಲ್ಲಿ ಕಿರಿಯರು, ಹಿರಿಯರು ಎಂಬ ಪ್ರಶ್ನೆ ಬರುವುದಿಲ್ಲ. ರಾಜ್ಯದ ಯುವಕರನ್ನು, ಹಿರಿಯರನ್ನು ಒಗ್ಗಟ್ಟು ಮೂಡಿಸಲು ವಿಜಯೇಂದ್ರ ಅವರಿಗೆ ಹೊಣೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಪರೀಕ್ಷೆ ಆಕ್ರಮ ತಡೆಗೆ ʼಕೆಇಎʼ ಹೊಸ ಪ್ಲಾನ್..!
ಸಿ.ಟಿ.ರವಿ, ಶಾಸಕ ಯತ್ನಾಳ್, ಸೋಮಣ್ಣ, ಲಿಂಭಾವಳಿ ಎಲ್ಲರೂ ಒಂದೇ ಕುಟುಂಬ. ಸೋಮಣ್ಣ ಪಕ್ಷ ಬಿಟ್ಟುಕೊಡುವ ವ್ಯಕ್ತಿಯಲ್ಲ. ನೇರವಾಗಿ ಮಾತನಾಡುವಂತ ವ್ಯಕ್ತಿ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಸರಿ ಮಾಡುತ್ತೇವೆ. ಬೈ ಎಲೆಕ್ಷನ್ ವೇಳೆ ಸೋಮಣ್ಣನವರು ಪಕ್ಷವನ್ನು ಗೆಲ್ಲಿಸಲು ಶ್ರಮ ವಹಿಸಿದ್ದಾರೆ. ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ವಿಜಯೇಂದ್ರ ಅವರಿಗೂ ಮಾರ್ಗದರ್ಶನ ಮಾಡಿ ಪಕ್ಷ ಕಟ್ಟುತ್ತೇವೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.