ಬೆಂಗಳೂರು: ವರಿಷ್ಠರು ಬಯಸಿದರೆ ವಿಧಾನಸಭಾ ಚುನಾವಣೆಗೆ ನಿಲ್ಲುತ್ತೇನೆ. ಯಾವುದೇ ಕ್ಷೇತ್ರದಿಂದ ನಿಲ್ಲಲು ಹೇಳಿದರೂ ನಿಲ್ಲುತ್ತೇನೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮಾಜಿ ನಾಯಕ ಎಸ್ ಆರ್ ಪಾಟೀಲ್ ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿ, 25 ವರ್ಷ ಮೇಲ್ಮನೆ ಸದಸ್ಯನಾಗಿ ಸಚಿವನಾಗಿದ್ದೆ. ಈಗ ಕೆಳ ಮನೆಗೆ ಸ್ಫರ್ಧೆಗೆ ಅವಕಾಶ ಕೊಟ್ಟರೆ ಸ್ಫರ್ಧಿಸುತ್ತೇನೆ , ನಾನು ಕಾಂಗ್ರೆಸ್ ಪಕ್ಷದಿಂದ ದೂರ ಆಗಿಲ್ಲ. ಕಾಂಗ್ರೆಸ್ ಜತೆಗೆ ಇದ್ದೇನೆ ಎಂದರು.
ಪಂಚಮಸಾಲಿ ಸಮುದಾಯ ಮೀಸಲಾತಿ ಬೇಡಿಕೆ ಇಟ್ಟು ಹೋರಾಡುತ್ತಿದ್ದಾರೆ. ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಗಮನ ಹರಿಸುತ್ತದೆ’ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಫರ್ಧೆ ವಿಚಾರ ಮಾತನಾಡುತ್ತಾ, ಕೋಲಾರ ಸೇರಿದಂತೆ ಹಲವು ಕಡೆ ಸಿದ್ದರಾಮಯ್ಯ ಸ್ಫರ್ಧೆಗೆ ಒತ್ತಾಯ ಇದೆ. ಬಾದಾಮಿಯಲ್ಲಿ ಒತ್ತಾಯ ಇದೆ. ಈಗಾಗಲೇ ಸಿದ್ದರಾಮಯ್ಯ ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ಸ್ಫರ್ಧಿಸುವುದಾಗಿ ಹೇಳಿದ್ದಾರೆ.
ಬಾಗಲಕೋಟೆ ನಾಯಕನಾಗಿ ನಾನು ಬಾದಾಮಿಗೆ ಕರೆಯುತ್ತಿದ್ದೇನೆ. ಸಿದ್ದರಾಮಯ್ಯ ಏನ್ ನಿರ್ಧಾರ ಮಾಡ್ತಾರೆ ಅಂತಾ ನೋಡಬೇಕು ಎಂದು ಹೇಳಿದರು. ಅಂದಹಾಗೆ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿರುವ ವಿಧಾನ ಪರಿಷತ್ ಪ್ರತಿಪಕ್ಷದ ಮಾಜಿ ನಾಯಕ ಎಸ್ ಆರ್ ಪಾಟೀಲ್ ಇತ್ತೀಚೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರು. ಎಸ್ ಆರ್ ಪಾಟೀಲ್ ದಿಢೀರ್ ಭೇಟಿ ನೀಡಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಸಿದ್ದರಾಮಯ್ಯ ಮತ್ತು ಪಕ್ಷದ ಕಾರ್ಯಕ್ರಮಗಳಿಂದ ಎಸ್ ಆರ್ ಪಾಟೀಲ್ ಅಂತರ ಕಾಪಾಡಿಕೊಂಡಿದ್ದರು.