ಅಯೋಧ್ಯೆ : ಶ್ರೀರಾಮ ಜನ್ಮಭೂಮಿಯ ಭದ್ರತೆಗಾಗಿ ವಿಶೇಷ ಭದ್ರತಾ ಪಡೆಯ (SSF) ಮೊದಲ ತಂಡವು ಅಯೋಧ್ಯೆಗೆ ತಲುಪಿದೆ. ಎಸ್‌ಎಸ್‌ಎಫ್‌ನ ಮೂರು ಕಂಪನಿಗಳಲ್ಲಿ 280 ಸೈನಿಕರಿದ್ದಾರೆ. ಈ ಯೋಧರಿಗೆ ಹತ್ತು ದಿನಗಳ ಕಾಲ ವಿಶೇಷ ತರಬೇತಿ ನೀಡಲಾಗುವುದು ಎಂದು ಎಸ್ಪಿ ಗೌತಮ್ ತಿಳಿಸಿದ್ದಾರೆ.
ಜನವರಿ 2024 ರಲ್ಲಿ ಉದ್ಘಾಟಿಸಲು ನಿರ್ಧರಿಸಲಾಗಿದ್ದು, ಟ್ರಸ್ಟ್ ಈ ಬಗ್ಗೆ ತನ್ನ ಸಿದ್ಧತೆಗಳಲ್ಲಿ ನಿರತವಾಗಿದೆ. ಎಸ್ ಎಸ್ ಎಫ್ ಪಡೆ, ಯೋಧರೊಂದಿಗೆ ಶ್ರೀರಾಮ ಜನ್ಮಭೂಮಿಯ ಒಳ ಸಂಕೀರ್ಣ ಮತ್ತು ಅದರ ಪಕ್ಕದಲ್ಲಿರುವ ಹೊರ ಸಂಕೀರ್ಣದ ಭದ್ರತೆಯನ್ನು ನಿರ್ವಹಿಸಲಿದೆ, ಭದ್ರತೆ ಮತ್ತು ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಮತ್ತು ಆಡಳಿತವು ಒಟ್ಟಾಗಿ ಕೆಲಸ ಮಾಡುತ್ತಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಲಿದ್ದು, ಅವರು ಬರುವ ಮೊದಲು ಎಲ್ಲ ಭದ್ರತಾ ವ್ಯವಸ್ಥೆ ಬಲಪಡಿಸಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ : ತಮಿಳುನಾಡಿಗೆ ʼಕಾವೇರಿʼ; ಟೈರ್ ಸುಟ್ಟು ರೈತರ ಆಕ್ರೋಶ
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾಧ್ಯಮದವರೊಂದಿಗೆ ಮಾತನಾಡಿ, ಶ್ರೀರಾಮ ಜನ್ಮಭೂಮಿ ದೇವಸ್ಥಾನದ ಗರ್ಭಗುಡಿಯಲ್ಲಿರುವ ರಾಮಲಾಲ ಪ್ರತಿಮೆ 51 ಇಂಚು ಎತ್ತರವಿದೆ, ಗರ್ಭಗುಡಿಯಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಕಮಲದ ಮೇಲೆ ನಿಂತಿರುವ ಮಗುವಿನ ರೂಪದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಮಕರ ಸಂಕ್ರಾಂತಿ ಮತ್ತು ಜನವರಿ 26 ರ ನಡುವಿನ ದಿನಾಂಕವನ್ನು ಉದ್ಘಾಟನೆಗೆ ನಿರ್ಧರಿಸಿದ್ದೇವೆ, ಇದ್ರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಲಿದ್ದೇವೆ ಎಂದು ತಿಳಿಸಿದರು.
ಏಕಕಾಲದಲ್ಲಿ 2500 ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ, ಇದಕ್ಕಾಗಿ ಶೌಚಾಲಯಗಳು, ವಿದ್ಯುತ್, ನೀರು, ಲಾಕರ್‌ಗಳು ಮತ್ತು ಆಸನಗಳಿಗೆ ಸರಿಯಾದ ವ್ಯವಸ್ಥೆಗಳೊಂದಿಗೆ ಯಾತ್ರಿ ಸೇವಾ ಕೇಂದ್ರ ಮತ್ತು ಆಸ್ಪತ್ರೆಯನ್ನು ಸಹ ನಿರ್ಮಿಸಲಾಗುವುದು. ಭಕ್ತರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಆರತಿ ಮತ್ತು ದರ್ಶನಕ್ಕೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ತಿಳಿದುಬಂದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.