ಮಂಗಳೂರು : ಭಾರತದ ಆತ್ಮ ಹಿಂದುತ್ವ ,ದೇಶದ ಸಂಸ್ಕೃತಿ ಹಿಂದೂ ಸಂಸ್ಕೃತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸನಾತನ ಅನ್ನೋದಕ್ಕೆ ಹುಟ್ಟು ಸಾವು ಇಲ್ಲ, ಭಾರತದಲ್ಲಿ ಇರುವುದು ಧರ್ಮ ಒಂದೇ , ಈ ಸಂಸ್ಕೃತಿ ಪರಂಪರೆಯನ್ನು ಪುರಾತನ ಕಾಲದಿಂದಲೂ ಭಾರತ ಇದನ್ನು ಉಳಿಸಿಕೊಂಡು ಬಂದಿದೆ ಎಂದರು.
ಭಾರತ ನಂಬಿಕೆ ಆಧಾರದಲ್ಲಿ ಇರುವ ದೇಶ, ಸನಾತನವಾಗಿ ಇರುವ ಧರ್ಮವನ್ನು ಅವಹೇಳನ ಮಾಡಲಾಗುತ್ತಿದೆ, ಉದಯನಿಧಿ ಸ್ಟಾಲೀನ್, ಡಿ ರಾಜಾ ಸೇರಿ ಕಾಂಗ್ರೆಸ್‌ನ ಹಲವಾರು ನಾಯಕರು ಹಿಂದೂ ಧರ್ಮ ಅವಹೇಳನ ಮಾಡಿದ್ದಾರೆ, ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮರಾಜಕಾರಣ ಎಂದರೆ ಭಾರತದ ಸಂಸ್ಕೃತಿಗೆ ಪರಂಪರೆಗೆ ಸಂವಿಧಾನಕ್ಕೆ ಅನುಗುಣವಾಗಿ ಆಡಳಿತ ಮಾಡುವುದು, ಸ್ಟಾಲಿನ್ ಹೇಳಿಕೆ ಸನಾತನ ಸಂಸ್ಕೃತಿಗೆ ಧಕ್ಕೆ ತಂದಿದೆ ಎಂದು ಆಕ್ರೋಶಿಸಿದರು.
ಇವರಿಗೆ ಭಾರತದ ಸಂಸ್ಕೃತಿ ಪರಂಪರೆಯ ಬಗ್ಗೆ ನಂಬಿಕೆ ಇಲ್ಲ, ಡಾ ಪರಮೇಶ್ವರ, ಪ್ರಿಯಾಂಕಾ ಖರ್ಗೆ ಕೂಡ ಹಿಂದೂ ಧರ್ಮದ ಅವಹೇಳನ ಮಾಡಿದ್ದಾರೆ, I.N.D.I.A ಒಕ್ಕೂಟದ ನೇತಾರರಾಗಿರುವ ಮಲ್ಲಿಕಾರ್ಜುನ ಖರ್ಗೆಯವರ ಈ ಹೇಳಿಕೆಗಳ ಬಗ್ಗೆ ಅಭಿಪ್ರಾಯವೇನು? ಸೋನಿಯಾ , ರಾಹುಲ್ ಗಾಂಧಿ ಈ ಬಗ್ಗೆ ಏನು ಹೇಳುತ್ತಾರೆ, ಸನಾತನ ಧರ್ಮದ ಬಗ್ಗೆ ಇವರ ಅನಿಸಿಕೆ ಏನು? ಈ ದೇಶದ ಸಂಸ್ಕೃತಿಯ ಬಗ್ಗೆ ಇವರ ನಂಬಿಕೆ ಏನು ಆ ಬಗ್ಗೆ ಹೇಳಿಕೆ ಕೊಡಲಿ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ನಡೆಸ್ತಿರುವ ಭ್ರಷ್ಟಾಚಾರದ ಮಿತಿಮೀರಿದೆ, ತಾಲೂಕು ಕಚೇರಿಯಿಂದ ಹಿಡಿದು ವಿಧಾನಸೌಧದವರೆಗೆ ಲಂಚದ ಪ್ರಕರಣಗಳು ಕೇಳಿ ಬರುತ್ತಿವೆ, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ರಾಜ್ಯದಲ್ಲಿ ನೀರಿನ ಅಭಾವ ತಲೆದೋರಿದೆ, ರೈತರು ಸಂಕಷ್ಟದಲ್ಲಿ ಇದ್ದಾರೆ, ಮಳೆ ಕಡಿಮೆಯಾಗಿದೆ ರೈತರ ಬೆಳೆಗಳಿಗೆ ನೀರಿಲ್ಲ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡ್ಯಕ್ಕೆ ತೆರಳಿ ಪರಿಸ್ಥಿತಿ ಪರಿಶೀಲಿಸಲಿದ್ದಾರೆ, ಪಾದಯಾತ್ರೆಯ ಮೂಲಕ ನಾವು ಹೋರಾಟ ಆರಂಭಿಸುತ್ತೇವೆ, ರಾಜ್ಯದ ರೈತರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ, ಬಿಜೆಪಿಯನ್ನು ಯಾರೂ ಬಿಡೋದಿಲ್ಲ ಎಂದು ಸ್ಪಷ್ಟಪಡಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.