ಕಲಬುರಗಿ : ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ನಿರಂತರವಾಗಿ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಎನ್ ರವಿ ಕುಮಾರ್ ಆರೋಪಿಸಿದರು.
ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಬಂಧನ ಖಂಡಿಸಿ ಚಿತ್ತಾಪುರದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಸಾಮಾಜಿಕ ಜಾಣತನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದರು ಎಂಬ ಹಿನ್ನೆಲೆ ಬಂಧಿಸಲಾಗಿದೆ, ಕಾಂಗ್ರೆಸ್ ನವರು ದ್ವೇಷದ ರಾಜಕಾರಣ ಮಾಡುತ್ತಿದ್ದು, ಪೊಲೀಸ್ ಅಧಿಕಾರಿಗಳು ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ, ಮಣಿಕಂಠ ಬಂದ ಮೇಲೆ ಚಿತ್ತಾಪುರದಲ್ಲಿ ಸಂಕಷ್ಟದಲ್ಲಿ ಇದ್ದವರ ರಕ್ಷಣೆಗೆ ಸಂಕಲ್ಪಸಭೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರಿಯಾಂಕ್ ಖರ್ಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವುದರಿಂದ ಪ್ರಿಯಾಂಕ್ ಖರ್ಗೆ ಅಂಡ್ ಪ್ರೈವೇಟ್ ಲಿಮಿಟೆಡ್ ಕಂಪನಿ ಅಂತ ಕಲ್ಬುರ್ಗಿ ಬರೆದು ಕೊಡೋಣ, ಕಲಬುರಗಿ ಪ್ರಿಯಾಂಕ್ ಖರ್ಗೆ ಅವರು ಏನು ಹೇಳುತ್ತಾರೆ ಅದು ಸತ್ಯ ಅವರು ಮಾತೇ ಶಾಸನಂ ಅವರು ಹೇಳಿದೆ ಶಾಸನಂ ಅಂತ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಿಯಾಂಕ್ ಖರ್ಗೆ ಇಲ್ಲ ಅಂದರೆ ಜೀವನವೇ ಇಲ್ಲ ಅಂತಾರಲ್ಲ ಅವರ ಜೀವನಕ್ಕೆ ಬೆಂಕಿ ಬಿದ್ದು ಹಾಳಾಗಿ ಬಿಡ್ಲಿ, ನಾಚಿಕೆ ಆಗಲ್ವಾ ನಿಮಗೆ? ಎಂದು ಆಕ್ರೋಶಿಸಿದರು. ಶಿಕ್ಷಣದ ಬಗ್ಗೆ ಇವರೊಬ್ಬರು ಒಂದು ರೀತಿಯಿಂದ ಶಿಕ್ಷಣ ತಜ್ಞರಂತೆ ಮಾತನಾಡುತ್ತಾರೆ, ಅಂಬೇಡ್ಕರ್ ಅವರಕ್ಕಿಂತ ದೊಡ್ಡವರಾ ನೀವು ? ಎಂದು ಪ್ರಿಯಾಂಕ ಖರ್ಗೆ ವಿರುದ್ಧ ವ್ಯಂಗ್ಯವಾಡಿದ್ದಾರೆ.