ಬೆಂಗಳೂರು : ಜನರಿಗೆ ‘ಕತ್ತಲೆ ಭಾಗ್ಯ’ ಕೊಡಲು ಸರ್ಕಾರ ಸಿದ್ಧತೆ ಮಾಡಿಕೊಳ್ತಿದೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದರು.
ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಿದ್ಯುತ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದೇ ಮೊದಲ ಬಾರಿಗೆ ಮಳೆಗಾಲದಲ್ಲಿಯೇ ಲೋಡ್ ಶೆಡ್ಡಿಂಗ್ ಶುರುವಾಗಿದೆ. ವಿದ್ಯುತ್ ಕೊರತೆ ಸರಿದೂಗಿಸಲು ಸರ್ಕಾರ ಮೂರು ತಿಂಗಳ ಮುಂಚೆಯೇ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆದರೆ, ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಇದರಿಂದ ನವೆಂಬರ್, ಡಿಸೆಂಬರ್ ವೇಳೆಗೆ ರಾಜ್ಯ ಕಗ್ಗತ್ತಲೆಗೆ ಹೋಗಲಿದೆ. ಥರ್ಮಲ್ ಪ್ಲಾಂಟ್ ಗಳಲ್ಲಿ ಸಾಕಷ್ಟು ಪ್ರಮಾಣದ ವಿದ್ಯುತ್ ಉತ್ಪಾದನೆ ಆಗ್ತಿಲ್ಲ. ವಿದ್ಯುತ್ ಇಲಾಖೆಯಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದರು.
ರೈತರ ಐಪಿ ಸೆಟ್ ಗಳಿಗೆ 7 ಗಂಟೆಗಳ ಕಾಲ ಉಚಿತ ವಿದ್ಯುತ್ ಕೊಡಲಾಗ್ತಿತ್ತು. ಆ ವಿದ್ಯುತ್ ಕಡಿತಗೊಳಿಸಿ ಗೃಹಜ್ಯೋತಿಗೆ ಕೊಡಲಾಗ್ತಿದೆ. ರೈತರಿಗೆ ಎರಡರಿಂದ ಮೂರು ಗಂಟೆ ಮಾತ್ರ ವಿದ್ಯುತ್ ಕೊಡುತ್ತಿದ್ದಾರೆ. ಇದು ಗೃಹಜ್ಯೋತಿಗೆ ವಿದ್ಯುತ್ ಹೊಂದಿಸುವ ಹುನ್ನಾರವಾಗಿದೆ. ಗೃಹಜ್ಯೋತಿ ಯೋಜನೆ ಕೂಡ ವಿಫಲವಾಗಿದೆ. ಮನೆಗೂ ಕರೆಂಟ್ ಇಲ್ಲ, ರೈತನ ಪಂಪ್ ಸೆಟ್ ಗೂ ಕರೆಂಟ್ ಇಲ್ಲ. 593 ಮಿಲಿಯನ್ ಯೂನಿಟ್ ವಿದ್ಯುತ್ ಖರೀದಿ ಆಗಷ್ಟ್ ತಿಂಗಳಲ್ಲಿ ಆಗಿದೆ. ಪೂರ್ವ ಸಿದ್ದತೆ ಸರಿಯಾಗಿದ್ದರೆ ಇನ್ನೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಿತ್ತು ಎಂದು ಕಿಡಿಕಾರಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.