Friday, September 29, 2023
spot_img
- Advertisement -spot_img

35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು : ಎರಡು ದಿನಗಳ ಹಿಂದೆ 10 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ, ಈಗ ಮತ್ತೆ 35 ಜನ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಗಮನಾರ್ಹವಾಗಿ, ಕೆಲ ತಿಂಗಳ ಹಿಂದೆಯಷ್ಟೇ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನಿಯುಕ್ತಿಗೊಂಡಿದ್ದ ಕುಲ್ದೀಪ್ ಕುಮಾರ್ ಜೈನ್ ಅವರನ್ನು ಕೂಡ ಯಾವುದೇ ಸ್ಥಳ ಸೂಚಿಸದೆ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೊಂಡ 35 ಮಂದಿ ಅಧಿಕಾರಿಗಳ ಮಾಹಿತಿ ಈ ಕೆಳಗಿನಂತಿದೆ :

  • ಅನುಪಮ್ ಅಗರ್ವಾಲ್-ಮಂಗಳೂರು ನಗರ ಪೊಲೀಸ್ ಆಯುಕ್ತ
  • ಡಾ.ಎಸ್. ಡಿ ಶರಣಪ್ಪ-ಡಿಐಜಿಪಿ & ನಿರ್ದೇಶಕರು, ಪೊಲೀಸ್ ಅಕಾಡೆಮಿ, ಮೈಸೂರು
  • ವರ್ತಿಕಾ ಕಟಿಯಾರ್-ಎಸ್​​​ಪಿ, ಸ್ಟೇಟ್ ಕ್ರೈಂ ರೆಕಾರ್ಡ್ ಬ್ಯೂರೋ
  • ಕಾರ್ತಿಕ್​​​​ ರೆಡ್ಡಿ-ಡಿಸಿಪಿ, ಬೆಂಗಳೂರು ಸಂಚಾರ ದಕ್ಷಿಣ ವಿಭಾಗ
  • ಕೆ.ಸಂತೋಷ್ ಬಾಬು-ಡಿಸಿಪಿ ಆಡಳಿತ ವಿಭಾಗ, ಬೆಂಗಳೂರು ನಗರ
  • ಯತೀಶ್ ಚಂದ್ರ-ಎಸ್​​​​ಪಿ, ಆಂತರಿಕ ಭದ್ರತಾ ವಿಭಾಗ
  • ಡಾ.ಭೀಮಾಶಂಕರ ಗುಳೇದ್-ಎಸ್​​​​ಪಿ, ಬೆಳಗಾವಿ
  • ನಿಕಂ ಪ್ರಕಾಶ್ ಅಮ್ರಿತ್-ಎಸ್​​​​ಪಿ, ವೈರ್ ಲೆಸ್
  • ರಾಹುಲ್ ಕುಮಾರ್ ಶಹಾಪುರವಾಡ್-ಡಿಸಿಪಿ, ಬೆಂಗಳೂರು ದಕ್ಷಿಣ ವಿಭಾಗ
  • ಡಿ.ದೇವರಾಜ್-ಡಿಸಿಪಿ, ಬೆಂಗಳೂರು ಪೂರ್ವ ವಿಭಾಗ
  • ಅಬ್ದುಲ್ ಅಹದ್-ಡಿಸಿಪಿ, ಬೆಂಗಳೂರು ಕೇಂದ್ರ ವಿಭಾಗ
  • ಎಸ್‌.ಗಿರೀಶ್-ಡಿಸಿಪಿ, ಬೆಂಗಳೂರು ಪಶ್ಚಿಮ ವಿಭಾಗ
  • ಸಂಜೀವ್ ಎಂ. ಪಾಟೀಲ್-ಡಿಸಿಪಿ, ವೈಟ್​​ಫೀಲ್ಡ್ ವಿಭಾಗ
  • ಕೆ.ಪರಶುರಾಮ್-ಎಸ್​​​​ಪಿ, ಇಂಟೆಲಿಜೆನ್ಸ್‌ ವಿಭಾಗ
  • ಹೆಚ್ ಡಿ.ಆನಂದ್ ಕುಮಾರ್-ಡೈರೆಕ್ಟೋರೆಟ್ ಸಿವಿಲ್ ರೈಟ್ಸ್, ಎನ್ಪೋರ್ಸ್ಮೆಂಟ್
  • ಡಾ.ಸುಮನ್ ಡಿ.ಪನ್ನೇಕರ್-ಎಐಜಿಪಿ, ಹೆಡ್ ಕ್ವಾರ್ಟರ್ಸ್-1
  • ಕಿಶೋರ್ ಬಾಬು- ಎಸ್ ಪಿ &ಪ್ರಿನ್ಸಿಪಲ್, ಪೊಲೀಸ್ ತರಬೇತಿ ಕೇಂದ್ರ, ಕಲಬುರಗಿ
  • ಡಾ.ಕೋನ ವಂಶಿಕೃಷ್ಣ-ಡಿಸಿಪಿ, ಕಮಾಂಡ್ ಸೆಂಟರ್, ಬೆಂಗಳೂರು
  • ಲಕ್ಷ್ಮಣ್ ನಿಂಬರಗಿ-ಎಸ್​​​​ಪಿ, ಸ್ಟೇಟ್ ಕ್ರೈಂ ರೆಕಾರ್ಡ್ ಬ್ಯೂರೋ
  • ಡಾ.ಕೆ.ಅರುಣ್-ಎಸ್​​​​ಪಿ, ಉಡುಪಿ
  • ಎಂ.ಎಸ್.ಮಹಮ್ಮದ್ ಸುಜೀತ-ಎಸ್​​​​ಪಿ, ಹಾಸನ
  • ಜಯಪ್ರಕಾಶ್-ಎಸ್​​​​ಪಿ, ಇಂಟೆಲಿಜೆನ್ಸ್ ವಿಭಾಗ
  • ಶೇಖರ್.ಹೆಚ್.ತೆಕ್ಕನ್ನವರ್, ಡಿಸಿಪಿ, ಸಿಸಿಬಿ ಬೆಂಗಳೂರು
  • ಸಾರಾ ಫಾತೀಮಾ-ಬೆಂಗಳೂರು ಸಂಚಾರ ಪಶ್ಚಿಮ ವಿಭಾಗ
  • ಸೋನಾವಾನೆ ರಿಷಿಕೇಶ್ ಭಗವಾನ್-ಎಸ್​​ಪಿ, ವಿಜಯಪುರ
  • ಲೋಕೇಶ್ ಭರಮಪ್ಪ-ಎಸ್​​ಪಿ, ರಾಜ್ಯ ಪೊಲೀಸ್ ಅಕಾಡೆಮಿ, ಮೈಸೂರು
  • ಆರ್.ಶ್ರೀನಿವಾಸ್ ಗೌಡ-ಡಿಸಿಪಿ 2, ಸಿಸಿಬಿ ಬೆಂಗಳೂರು
  • ಪಿ.ಕೃಷ್ಣಕಾಂತ್-ಎಐಜಿಪಿ (ಆಡಳಿತ ವಿಭಾಗ)
  • ವೈ.ಅಮರನಾಥ್ ರೆಡ್ಡಿ-ಎಸ್​ಪಿ, ಬಾಗಲಕೋಟ
  • ಹರಿರಾಮ್ ಶಂಕರ್-ಎಸ್​ಪಿ, ಇಂಟೆಲಿಜೆನ್ಸ್‌ ವಿಭಾಗ
  • ಅದ್ದೂರು ಶ್ರೀನಿವಾಸುಲು-ಎಸ್​ಪಿ, ಕಲಬುರಗಿ
  • ಅನ್ಶು ಕುಮಾರ್-ಎಸ್​ಪಿ, ಕೋಸ್ಟಲ್ ಸೆಕ್ಯುರಿಟಿ ಪೊಲೀಸ್, ಉಡುಪಿ
  • ಕನ್ನಿಕಾ ಸಿಕ್ರಿವಾಲ್-ಡಿಸಿಪಿ, ಕಾನೂನು ಸುವ್ಯವಸ್ಥೆ, ಕಲಬುರಗಿ
  • ಕುಶಾಲ್ ಚೌಸ್ಕಿ-ಜಂಟಿ ನಿರ್ದೇಶಕ, ವಿಧಿವಿಜ್ಞಾನ ಪ್ರಯೋಗಾಲಯ, ಬೆಂಗಳೂರು
  • ರವೀಂದ್ರ ಕಾಶಿನಾಥ್ ಗಡದಿ-ಎಸ್​ಪಿ, ಇಂಟೆಲಿಜೆನ್ಸ್‌ ವಿಭಾಗ

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles