Friday, September 29, 2023
spot_img
- Advertisement -spot_img

ಬಿಜೆಪಿ ಗಟ್ಟಿಯಾಗಲು ರಾಜ್ಯ ನಾಯಕರು ಒಗ್ಗಟ್ಟು ಪ್ರದರ್ಶಿಸಬೇಕು : ಸೀಮಾ ಮಸೂತಿ

ಧಾರವಾಡ : ದೇಶದ ಚೌಕಿದಾರ ಎನ್ನುವ ಪ್ರಧಾನಿ ಮೋದಿ ಕಾರ್ಯ‌ವು ಇಡೀ ಭಾರತಿಯರೇ ಮೆಚ್ಚಬೇಕಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಸಂಸದ ಸ್ಥಾನ ಬಿಜೆಪಿ‌ಯ ಪಾಲಾಗುತ್ತದೆ ಎಂದು ಗ್ರಾಮೀಣ ಮಾಜಿ‌ ಶಾಸಕಿ ಸೀಮಾ ಮಸೂತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಪ್ರಧಾನಿ‌ ಮೋದಿ ಅವರು ಜನಮೆಚ್ಚುವ ಕೆಲಸ ಮಾಡುತ್ತಾ, ಚೌಕಿದಾರ ಎನಿಸಿಕೊಂಡಿದ್ದಾರೆ. ಅವರ ನೇತೃತ್ವದಡಿಯಲ್ಲಿ ಭಾರತವು ಒಳ್ಳೆಯ ‌ಕೆಲಸಗಳಿಗೆ ಸಾಕ್ಷಿಯಾಗುತ್ತಿದೆ. ‘ಭಾರತ್’ ಎಂದು ಮರುನಾಮಕರಣ ‌ಮಾಡುವುದರಲ್ಲಿ ತಪ್ಪೇನಿಲ್ಲಾ ಎಂದು ಕೇಂದ್ರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ : ‘ಬೆಳಗ್ಗೆ ಎದ್ದಾಗ ಲಕ್ಷ್ಮಿ ಶ್ಲೋಕ, ಮಲಗುವಾಗ ಹನುಮನ ಶ್ಲೋಕ ಹೇಳ್ತೀನಿ’

ನಾವೆಲ್ಲ ಭಾರತೀಯರು ‘ಭಾರತ್’ ಎಂದು ಮರುನಾಮಕರಣ ‌ಮಾಡುತ್ತಿರುವ ಕುರಿತು ಸುಖಾ ಸುಮ್ಮನೇ ಪ್ರತಿಪಕ್ಷಗಳು ಆರೋಪ ಮಾಡುತ್ತಿವೆ‌ ಇದು ಸರಿಯಲ್ಲ. ಧಾರವಾಡ ‌ಜಿಲ್ಲೆಯಲ್ಲಿ ಈ‌ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಜಯ ಗಳಿಸುತ್ತೆ. ಕಾರ್ಯಕರ್ತರು ಪಕ್ಷದ ಮುಖಂಡರು ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿ ‌ಕೆಲಸ ಮಾಡಬೇಕೆಂದು ಮಾಜಿ ಶಾಸಕಿ ಕರೆ ನೀಡಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ನನಗೆ ಟಿಕೆಟ್ ತಪ್ಪಿದೆ. ನಾನು ಕ್ಷೇತ್ರದಲ್ಲಿ ಬಹಳಷ್ಟು ಓಡಾಡಿಕೊಂಡು ಕೆಲಸ ಮಾಡಿದ್ದೆ, ಆದರೆ ನಾಯಕರು ನನಗೆ ಟಿಕೆಟ್ ‌ಕೊಡಲಿಲ್ಲ ಎಂದು ಸ್ವಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ನಮಗೆಲ್ಲ ಹಿನ್ನಡೆ ಆಗಿದೆ. ಹೊಸಬರಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ನನಗೆ‌ ಶಾಸಕಸ್ಥಾನದ ಟಿಕೆಟ್ ಕೈ ತಪ್ಪಿತ್ತು. ಆದರೆ ಪಕ್ಷದ ಹಿರಿಯ ನಾಯಕರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದ್ದರು. ಅದರಂತೆ ನಾನು ಪಕ್ಷದಲ್ಲಿ ಮುಂದುವರಿಯುತ್ತಿರುವೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ ಸರ್ಕಾರ ಓಡುತ್ತಿರುವ ಬಸ್ ಆಗಿದೆ. ಕಾಂಗ್ರೆಸ್‌ನ ಯಾವ ನಾಯಕರೂ ಸಹ ನನ್ನನ್ನು ಸಂಪರ್ಕ ಮಾಡಿಲ್ಲ. ಕಾಂಗ್ರೆಸ್ ಸೇರುತ್ತಿರುವ ನಾಯಕರು ಬಸ್ಸಿನ ಸೀಟಿನಲ್ಲಿ ಕುಳಿತುಕೊಂಡು ನಾಯಕರ ಜೊತೆಗೆ ಚರ್ಚೆ ಮಾಡಬೇಕು. ಧಾರವಾಡ ಜಿಲ್ಲೆಯ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಪ್ರದೀಶ ಶೆಟ್ಟರ ಕಾಂಗ್ರೆಸ್ ‌ಸೇರುವುದಿಲ್ಲ, ಅವರು ಪಕ್ಷದಲ್ಲಿದ್ದು ಕೆಲಸ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಗಟ್ಟಿಯಾಗಿ ಬಲಗೊಳಿಸಲು ರಾಜ್ಯದ ನಾಯಕರು ಒಂದಾಗಬೇಕಿದೆ ಸೀಮಾ ಮಸೂತಿ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles