ರಾಜ್ಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ 35 ಸ್ಥಾನಗಳ ಆಯ್ಕೆಗಾಗಿ ನಡೆದ ಚುನಾವಣೆ ಮತ ಎಣಿಕೆ ಕಾರ್ಯ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದು, ತಡರಾತ್ರಿ ಮತ ಎಣಿಕೆ ಕಾರ್ಯ ಪೂರ್ಣಗೊಂಡ ಬಳಿಕ ಫಲಿತಾಂಶ ಹೊರಬಿದ್ದಿದೆ.
ಈ ಬಾರಿ ಸಾಕಷ್ಟು ಕುತೂಹಲ ಮೂಡಿಸಿದ್ದ ಒಕ್ಕಲಿಗರ ಚುನಾವಣೆಯಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳು ಕಿಮ್ಸ್ ಸಂಸ್ಥೆಯ ವೈದ್ಯ ಡಾ.ಆಂಜನಪ್ಪ ಮತ್ತು ಕೆಂಚಪ್ಪಗೌಡ ಅವರ ಗುಂಪಿನ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ.
ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ತಮಿಳುನಾಡಿನ ಹೊಸೂರು ಜಿಲ್ಲೆಗಳಿಂದ 15 ಸ್ಥಾನಗಳಿಗೆ 141 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ ಇದರಲ್ಲಿ ವೈದ್ಯ ಡಾ.ಆಂಜನಪ್ಪ ಮತ್ತು ಕೆಂಚಪ್ಪಗೌಡ ಅವರ ಗುಂಪಿನ ಅಭ್ಯರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.
ಚುನಾವಣೆಯಲ್ಲಿ ವಿಜೇತರ ಪಟ್ಟಿ ಜಿಲ್ಲಾವಾರು ಇಂತಿದೆ.
- ಡಾ.ಹೆಚ್.ಟಿ. ಅಂಜನಪ್ಪ (68,398 ಮತ)
- ಹೆಚ್.ಎನ್.ಅಶೋಕ್ (61,892)
- ಬಿ.ಕೆಂಚಪ್ಪಗೌಡ (58,066)
- ಆರ್. ಪ್ರಕಾಶ್ (56,694)
- ಹೆಚ್‌ಸಿ. ಜಯಮುತ್ತು (56,254)
- ಸಿ.ದೇವರಾಜು ಹಾಪ್‌ಕಾಮ್ಸ್ (55,903)
- ಹೆಚ್.ಶ್ರೀನಿವಾಸ್ (49,217)
- ಸಿ.ಎಂ. ಮಾರೇಗೌಡ (48,492)
- ಬಿ.ವಿ. ರಾಜಶೇಖರಗೌಡ (46,180)
- ಕೆ.ಎಸ್. ಸುರೇಶ್(45,601)
- ಎಂ.ಎಸ್.ಉಮಾಪತಿ (44,709)
- ವೆಂಕಟರಾಮೇಗೌಡ (43,022)
- ಡಿ. ಹನುಮಂತಯ್ಯ ಚೋಳನಾಯಕನಹಳ್ಳಿ (41,687)
- ಎಂ. ಪುಟ್ಟಸ್ವಾಮಿ (41,165)
- ಡಾ. ವಿ. ನಾರಾಯಣಸ್ವಾಮಿ (40,728)
- ಚಿತ್ರದುರ್ಗ: ಜೆ. ರಾಜು (4,074)
- ಚಿಕ್ಕಮಗಳೂರು: ಪೂರ್ಣೇಶ್ (20,144)
- ಕೋಲಾರ ಮತ್ತು ಚಿಕ್ಕಬಳ್ಳಾಪುರ: ಡಾ.ರಮೇಶ್ ( 40,434), ಕೋನಪ್ಪರೆಡ್ಡಿ (32,451), ಯಲವಳ್ಳಿ ರಮೇಶ್ (24,676)
- ಕೊಡಗು: ಹರಪಳ್ಳಿ ರವೀಂದ್ರ (9,157)
- ಮೈಸೂರು: ಕೆ.ವಿ.ಶ್ರೀಧರ್ (12,267), ಎಂ.ಬಿ.ಮಂಜೇಗೌಡ (8,790), ಸಿ.ಜಿ. ಗಂಗಾಧರ್ ( 10,174)
- ಶಿವಮೊಗ್ಗ ಮತ್ತು ಉತ್ತರಕನ್ನಡ: ಸಿರಿಬೈಲ್ ಧರ್ಮೇಶ್ ( 5,808)
- ಮಂಡ್ಯ: ಅಶೋಕ್ ಜಯರಾಮ್ (55,721), ಮೂಡ್ಯಾ ಚಂದ್ರು ( 36,628), ರಾಘವೇಂದ್ರ (33,986), ನಲ್ಲಿಗೆರೆ ಬಾಲು (38,622)
- ದಕ್ಷಿಣ ಕನ್ನಡ ಮತ್ತು ಉಡುಪಿ: ಡಾ. ರೇಣುಕಾಪ್ರಸಾದ್ (3,309)
- ಹಾಸನ: ಸಿ.ಎನ್. ಬಾಲಕೃಷ್ಣ (32,311), ಬಾಗೂರು ಮಂಜೇಗೌಡ (20,388), ರಘುಗೌಡ (30,555)
- ತುಮಕೂರು: ಹನುಮಂತರಾಯಪ್ಪ (14,901), ಲೋಕೇಶ್ ನಾಗರಾಜಯ್ಯ (11,027)