ಕೋಲಾರ: ಮುಂಬರುವ ವಿಧಾನಸಭೆ ಚುನಾವಣೆಗೆ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೋಲಾರದಲ್ಲಿ ಕರಪತ್ರಗಳು ಓಡಾಡುತ್ತಿವೆ. ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡುತ್ತಿದ್ದಂತೆ ಪರ ವಿರೋಧದ ಚರ್ಚೆಗಳು ಆರಂಭವಾಗಿವೆ.
ಮಾಜಿ ಸಿಎಂ ಸಿದ್ದರಾಮಯ್ಯ ಒಬ್ಬ ದಲಿತ ವಿರೋಧಿ, ಹಿಂದೂ ವಿರೋಧಿ ಅನ್ನೋದನ್ನೆ ಬಂಡವಾಳ ಮಾಡಿಕೊಂಡ ಕೆಲವರು ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ದಲಿತ ನಾಯಕರನ್ನ ಸೋಲಿಸಿದ ಸಿದ್ದರಾಮಯ್ಯ ಅವರನ್ನ ಸೋಲಿಸಿ ಎಂಬ ಕರಪತ್ರಗಳನ್ನ ಹಂಚಿಕೆ ಮಾಡುವ ಮೂಲಕ ಅಪಪ್ರಚಾರಕ್ಕೆ ಮುಂದಾಗಿದ್ದಾರೆ.
ಸಿದ್ದರಾಮಯ್ಯ ಸ್ಪರ್ಧೆ ಹಿನ್ನೆಲೆ ಅವರ ವಿರುದ್ಧ ಕ್ಷೇತ್ರದಲ್ಲಿ ದಲಿತ ಮತದಾರರ ಜಾಗೃತಿ ಅಭಿಯಾನ ಶುರುವಾಗಿದ್ದು, ದಲಿತ ನಾಯಕರನ್ನ ಸೋಲಿಸಿದ ಸಿದ್ದರಾಮಯ್ಯರನ್ನ ಸೋಲಿಸಿ ಎಂಬ ಕರಪತ್ರ ಹರಿದಾಡುತ್ತಿದೆ. ಸಿದ್ದರಾಮಯ್ಯ ಅವರನ್ನ ಸೋಲಿಸಿ ದಲಿತ ಮುಖ್ಯಮಂತ್ರಿ ಹಾದಿ ಸುಲಭಗೊಳಿಸಿ ಎಂಬ ಕರಪತ್ರ ಕೋಲಾರ ಜಿಲ್ಲೆಯಾದ್ಯಂತ ಓಡಾಡುತ್ತಿದೆ.
ಸಿದ್ದರಾಮಯ್ಯ ರನ್ನ ಸೋಲಿಸುವ ಮೂಲಕ ಕೋಲಾರ ದಲಿತರ ಸ್ವಾಭಿಮಾನ ಮೆರೆಯೋಣ ಎಂಬ ಸ್ಲೋಗನ್ಸ್ ಇರುವ ಕರಪತ್ರಗಳು ಕೋಲಾರದಲ್ಲಿ ಹಂಚಿಕೆಯಾಗುತ್ತಿವೆ.