Friday, September 29, 2023
spot_img
- Advertisement -spot_img

‘ಅನಿಷ್ಟ ಸರ್ಕಾರದ ವಿರುದ್ಧ ಹೋರಾಟ ಅವಶ್ಯಕ; ಮೈತ್ರಿ ಅನಿವಾರ್ಯ’

ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಟೀಕಿಸಿರುವ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಈ ಅನಿಷ್ಟ ಸರ್ಕಾರದ ವಿರುದ್ಧ ಹೋರಾಟ ಅವಶ್ಯಕತೆ ಇದೆ. ಹಾಗಾಗಿ, ಮೈತ್ರಿ ಅನಿವಾರ್ಯ’ ಎಂದು ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾತನಾಡಿದ ಬೊಮ್ಮಾಯಿ, ‘ಈಗಾಗಲೇ ಎರಡೂ ಪಕ್ಷಗಳು ಒಂದಾಗಬೇಕು ಎಂದು ನಿರ್ಧರಿಸಲಾಗಿದೆ. ಮುಂದಿನ ಸಾಧಕ ಬಾದಕಗಳ ಬಗ್ಗೆ ಚರ್ಚೆಯಾಗಬೇಕಿದೆ. ಎರಡೂ ಪಕ್ಷದ ವರಿಷ್ಠರು ಸೇರಿ ತೀರ್ಮಾನ ಮಾಡಲಿದ್ದಾರೆ. ಮೈತ್ರಿ ಕುರಿತು ಕಾಂಗ್ರೆಸ್ ನಾಯಕರು ಟೀಕಿಸುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ನಾಯಕರು ಸೋಲಿನಿಂದ ಅಸಹಾಯಕವಾಗಿವೆ ಎಂದು ಹೇಳಿದ್ದಾರೆ. ಈಗ ಇಂಡಿಯಾ (I.N.D.I.A) ಒಕ್ಕೂಟ ಒಗ್ಗಟ್ಟಾಗಿದ್ದಾರೆ. ಒಬ್ಬರಿಗೊಬ್ಬರು ಆಗದ ಮಮತಾ ಬ್ಯಾನರ್ಜಿ, ಸಿಪಿಐ, ಸಿಪಿಎಂ, ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ಎಲ್ಲರೂ ಒಟ್ಟಾಗಿದ್ದಾರೆ. ವಿರೋಧ ಪಕ್ಷಗಳು ಒಟ್ಟಾಗಿವೆ ಎಂದ ಮಾತ್ರಕ್ಕೆ ಅವರೆಲ್ಲಾ ಅಸಹಾಯಕರಾ’ ಎಂದು ಪ್ರಶ್ನಿಸಿದರು.

‘ರಾಜಕಾರಣದ ಇತಿಹಾಸದಲ್ಲಿ ಅನೇಕ ಬದಲಾವಣೆ ಆಗಿದೆ; ಈ ಅನಿಷ್ಟ ಸರ್ಕಾರದ ವಿರುದ್ಧ ಹೋರಾಟ ಅವಶ್ಯಕತೆ ಇದೆ. ಹಾಗಾಗಿ, ಮೈತ್ರಿ ಅನಿವಾರ್ಯ’ ಎಂದು ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಬೊಮ್ಮಾಯಿ ಸಮರ್ಥಿಸಿಕೊಂಡರು.

ಇದನ್ನೂ ಓದಿ; ಸಂಸತ್ ಸಿಬ್ಬಂದಿಗೆ ಹೊಸ ಸಮವಸ್ತ್ರ: ಅಂಗಿ ಮೇಲೆ ಕಮಲದ ಚಿತ್ರ, ಖಾಕಿ ಪ್ಯಾಂಟ್!

ಸಿದ್ದರಾಮಯ್ಯ ಬಿಜೆಪಿ ಸೇರುವ ಪ್ರಯತ್ನ ಮಾಡಿದ್ರು ಎನ್ನುವ ದೇವೇಗೌಡರ ಹೇಳೀಕೆಗೆ ಪ್ರತಿಕ್ರಿಯಿಸಿ, ‘ಈಗಾಗಲೇ ಸಿದ್ದರಾಮಯ್ಯ ಹೇಳಿದ್ರಲ್ವಾ? ನಾಯಕರನ್ನ ಭೇಟಿ ಮಾಡಿದ ಮಾತ್ರಕ್ಕೆ ಸಿದ್ದಾಂತ ಬದಲಾಗಲ್ಲ ಅಂತ. ಅಷ್ಟೇ ಇದರ ಉತ್ತರ’ ಎಂದರು.

ಸಚಿವ ಡಿ ಸುಧಾಕರ್ ವಿರುದ್ಧದ ಭೂ ಕಬಳಿಕೆ ವಿಚಾರವಾಗಿ ಮಾತನಾಡಿ, ‘ಎಫ್ಐಆರ್ ಆಗಿದ್ರೆ ಇದನ್ನ ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ಪ್ರಕರಣದ ಸತ್ಯಾಸತ್ಯತೆ ಹೊರಗೆ ಬರಬೇಕು. ಯಾರೇ ತಪ್ಪಿತಸ್ಥರಿದ್ರೂ, ಎಷ್ಟೇ ದೊಡ್ಡವರಿದ್ರೂ ಶಿಕ್ಷೆ ಆಗಲೇಬೇಕು’ ಎಂದರು.

ಇದನ್ನೂ ಓದಿ; ಆರ್.ಅಶೋಕ್‌ಗೆ ಸಂಕಷ್ಟ ತಂದಿಟ್ಟ ‘ಡಿ.ಕೆ. ಸಹೋದರರು’!

ಕಾವೇರಿ ನೀರಿನ ವಿಚಾರವಾಗಿ ಮಾತನಾಡಿ, ‘ಈಗಾಗಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡೋದಿಲ್ಲ ಅಂತ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆ. ತಮ್ಮ ಹೇಳಿಕೆಗೆ ಮುಂದಿನ ದಿನ ಎಷ್ಟು ಗಟ್ಟಿಯಾಗಿ ನಿಲ್ತಾರೆ ನೋಡೋಣ’ ಎಂದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles