Wednesday, March 22, 2023
spot_img
- Advertisement -spot_img

ಪ್ರಾಂಶುಪಾಲರಿಂದ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯ ಮನವೊಲಿಕೆ

ಬೆಂಗಳೂರು: ಮಲ್ಲೇಶ್ವರಂ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಗೆ ಪ್ರವೇಶ ನಿರಾಕರಿಸಲಾಗಿದೆ. ಹಿಜಾಬ್ ತೆಗೆದು ಕೇಂದ್ರದೊಳಗೆ ತೆರಳಿದ ಬಳಿಕವೇ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ.

ಪರೀಕ್ಷೆ ಆರಂಭವಾಗುವ ಕೆಲ ನಿಮಿಷ ಮುನ್ನ ಆಕೆಯ ಮನವೊಲಿಸಿ ಹಿಜಾಬ್ ತೆಗೆಸಿ ಪರೀಕ್ಷೆ ಕೇಂದ್ರದೊಳಗೆ ಕಳುಹಿಸಿಕೊಡಲಾಯಿತು. ವಿದ್ಯಾರ್ಥಿನಿ ಸದ್ಯ ಪರೀಕ್ಷೆ ಬರೆದಿದ್ದಾಳೆ. ಸಮವಸ್ತ್ರ ಕಡ್ಡಾಯ, ಹಿಜಾಬ್ ಧರಿಸಲು ಅವಕಾಶ ಇಲ್ಲ, ಕಟ್ಟು ನಿಟ್ಟಾಗಿ ಎಲ್ಲರೂ ನಿಯಮ ಪಾಲಿಸಲೇಬೇಕು ಎಂದು ಸಚಿವ ಬಿಸಿ ನಾಗೇಶ್ ಹೇಳಿದ್ದರು.

ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದರೆ ಅಂಥವರಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗದು. ಈ ನಿಯಮ ಶಿಕ್ಷಣ ಸಂಸ್ಥೆಗಳಿಗೂ ಪಾಲನೆ ಮಾಡುವಂತೆ ನಿರ್ದೇಶನ ನೀಡಿದ್ದರು. ಕಳೆದ ವರ್ಷ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ಈ ವರ್ಷವೂ ಬದ್ಧವಾಗಿದೆ.

ಅಲ್ಲದೇ ವಸ್ತ್ರಸಂಹಿತೆ ವಿಚಾರದಲ್ಲಿ ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದ್ದು, ಅದರ ಪಾಲನೆ ಮಾಡಲಿದ್ದೇವೆ. ಹಿಜಾಬ್ ಧರಿಸಿ ಕೇಂದ್ರದೊಳಗೆ ತೆರಳಲು ಅವಕಾಶ ಇಲ್ಲ ಎಂದಿದ್ದರು. ಪರೀಕ್ಷಾ ಕೇಂದ್ರದ ಒಳಗೆ ಹಿಜಾಬ್ ಧರಿಸಿ ಬರುವುದನ್ನು ಹೈಕೋರ್ಟ್ ಅನುಮತಿಸಿಲ್ಲ. ತೀರ್ಪು ಬರುವವರೆಗೆ ಹಿಂದಿನ ಆದೇಶವೇ ಪಾಲನೆಯಲ್ಲಿ ಇರಲಿದೆ ಎಂದು ತಿಳಿಸಿದ್ದರು.

Related Articles

- Advertisement -

Latest Articles