ಹುಬ್ಬಳ್ಳಿ: ಸಿಎಂ ಬೊಮ್ಮಾಯಿ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಲಿದ್ದಾರೆ. ಸಿಎಂ ಬೊಮ್ಮಾಯಿಯವರಿಗೆ ನಟ ಕಿಚ್ಚ ಸುದೀಪ್, ನಳೀನ್ ಕುಮಾರ್ ಕಟೀಲ್, ಪ್ರಹ್ಲಾದ್ ಜೋಷಿ, ಬಿ.ಸಿ ಪಾಟೀಲ್, ಜೆಪಿ ನಡ್ಡಾ ಸೇರಿ ಹಲವರು ಸಾಥ್ ಕೊಡಲಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಕಿತ್ತೂರು ಚೆನ್ನಮ್ಮ ವೃತ್ತದಿಂದ ಬೃಹತ್ ಶೋ ನಡೆಸಲಿದ್ದಾರೆ, ಸಿಎಂ ಬೊಮ್ಮಾಯಿಯವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಸಂಸದ ಉದಾಸಿ, ಸಿಸಿ ಪಾಟೀಲ್, ಸೇರಿ ಹಲವು ಮುಖಂಡರು ಸಾಥ್ ನೀಡಿದ್ದರು. ಅಂದಹಾಗೇ ಕಳೆದ ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್ ಸಿಎಂ ಬೊಮ್ಮಾಯಿಯವರಿಗೆ ಬೆಂಬಲಿಸೋದಾಗಿ ಹೇಳಿದ್ದರು.
ಇಂದು ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಬೊಮ್ಮಾಯಿ ಪರ ಸುದೀಪ್ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಸುದೀಪ್ ಭಾಗಿ ಬಗ್ಗೆ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ ನಟ ಸುದೀಪರನ್ನು ಯಾವುದೇ ಪ್ರಚಾರಕ್ಕೆ ಬಳಸಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಪ.ಪಂಗಡದ 15 ಮೀಸಲು ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳಿಂದ ನಮ್ಮ ಜನಾಂಗದವರೇ ಸ್ಪರ್ಧಿಸುತ್ತಾರೆ, ಇಲ್ಲಿ ಯಾರೇ ಗೆದ್ದರೂ- ಸೋತರೂ ಸಮುದಾಯದವರೇ ಆಗಿರುವುದರಿಂದ ಇಲ್ಲಿ ಒಂದು ಪಕ್ಷದ ಪರವಾಗಿ ನೀವು ಪ್ರಚಾರಕ್ಕೆ ಹೋದರೆ ಜನಾಂಗದಲ್ಲಿ ತಪ್ಪು ಭಾವನೆ ಮೂಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.