Wednesday, May 31, 2023
spot_img
- Advertisement -spot_img

ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡರ ಪತ್ನಿ ಸುಧಾ ಶಿವರಾಮೇಗೌಡರಿಗೆ ಬಿಜೆಪಿ ಟಿಕೆಟ್

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಸರಣಿ ಸಭೆ ನಡೆಸಿದ ಬಿಜೆಪಿ ಕೊನೆಗೂ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಬಾರಿಯ ವಿಶೇಷತೆ ಅಂದರೆ 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.

ಮೊದಲ ಪಟ್ಟಿಯಲ್ಲಿ 8 ಮಹಿಳೆಯರಿಗೆ ಟಿಕೆಟ್ ಘೋಷಿಸಿದ್ದು, ಅದರಲ್ಲಿ ಅಚ್ಚರಿ ಎಂಬಂತೆ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡರ ಪತ್ನಿ ಸುಧಾ ಶಿವರಾಮೇಗೌಡರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಸುಧಾ ಶಿವರಾಮೇಗೌಡರು ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕ ರಾಮಕೃಷ್ಣಪ್ಪರ ಪುತ್ರಿಯಾಗಿದ್ದು ರಾಜಕೀಯ ಹಿನ್ನೆಲೆ ಉಳ್ಳವರಾಗಿದ್ದರೂ ರಾಜಕಾರಣಕ್ಕೆ ಎಂಟ್ರಿಯಾಗಿರಲಿಲ್ಲ. ಈ ಬಾರಿ ಅಚ್ಚರಿ ಎಂಬಂತೆ ಬಿಜೆಪಿ ಸುಧಾ ಅವರಿಗೆ ಮಣೆ ಹಾಕಿದೆ. ತುರುವೇಕೆರೆ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕೆ.ಹೆಚ್ ರಾಮಕೃಷ್ಣಯ್ಯನವರ ಪುತ್ರಿಯಾದ ಸುಧಾ ಶಿವರಾಮೇಗೌಡರು ಸದ್ಯ ನಾಗಮಂಗಲದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಇತ್ತೀಚೆಗಷ್ಟೇ ಶಿವರಾಮೇಗೌಡ, ಮತ್ತು ಅವರ ಪುತ್ರ ಚೇತನ್‌ಗೌಡ ಬಿಜೆಪಿ ಸೇರಿದ್ದರು. ಸ್ವತ: ಶಿವರಾಮೇಗೌಡರೇ ಕಣಕ್ಕಿಳಿಯುತ್ತಾರೆ ಅಥವಾ ಅವರ ಪುತ್ರ ಚೇತನ್‌ ಸ್ಪರ್ಧಿಸ್ತಾರೆ ಎಂದು ಹೇಳಲಾಗಿ. ಆದ್ರೆ ಎಲ್ಲರ ಯೋಚನೆಗಳೂ ಬುಡಮೇಲಾಗಿದ್ದು ಇದೀಗ ನಾಗಮಂಗಲ ಕ್ಷೇತ್ರದಲ್ಲಿ ಸುಧಾ ಶಿವರಾಮೇಗೌಡ ಸ್ಪರ್ಧಿಸಲಿದ್ದಾರೆ.

ಇನ್ನೂ ಬಿಜೆಪಿ ಮೊದಲ ಪಟ್ಟಿಯಲ್ಲಿ ಮಹಿಳಾ ಅಭ್ಯರ್ಥಿಗಳಾದ ಸಂಡೂರು: ಶಿಲ್ಪಾ ರಾಘವೇಂದ್ರ, ನಾಗಮಂಗಲ: ಸುಧಾ ಶಿವರಾಮೇಗೌಡ, ಪುತ್ತೂರು: ಆಶಾ ತಿಮ್ಮಪ್ಪ, ಹಿರಿಯೂರು: ಪೂರ್ಣಿಮಾ ಶ್ರೀನಿವಾಸ್, ಕಾರವಾರ: ರೂಪಾಲಿ ಸಂತೋಷ್ ನಾಯ್ಕ್, ಸುಳ್ಯ: ಭಗೀರಥಿ ಮರುಳ್ಯ ಸವದತ್ತಿ : ಯಲ್ಲಮ್ಮ ರತ್ನಾ ವಿಶ್ವನಾಥ್ ಮಾಮನಿ,ನಿಪ್ಪಾಣಿ: ಶಶಿಕಲಾ ಜೊಲ್ಲೆ ಇವರಿಗೆ ಟಿಕೆಟ್ ನೀಡಲಾಗಿದೆ.

Related Articles

- Advertisement -

Latest Articles