Monday, December 4, 2023
spot_img
- Advertisement -spot_img

ಸುಧಾಕರ್ ನಿಮ್ಮ ಸ್ಥಾನಕ್ಕೆ ತಕ್ಕಂತೆ ಜವಾಬ್ದಾರಿಯಿಂದ ವರ್ತಿಸಿ : ಬಿ.ವೈ ವಿಜಯೇಂದ್ರ

ಶಿವಮೊಗ್ಗ : ಸುಧಾಕರ್ ಒಬ್ಬ ಜವಾಬ್ದಾರಿಯುತ ಮಂತ್ರಿ, ಗೌರವಾನ್ವಿತ ಸ್ಥಾನದಲ್ಲಿರುವ ಅವರು ದಲಿತ ಹಾಗೂ ಬ್ರಾಹ್ಮಣ ಸಮಾಜದ ಬಗ್ಗೆ ಮಾತನಾಡಿರುವುದು ಸರಿಯಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ನಗರದಲ್ಲಿ ಸುದ್ಧಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಧಾಕರ್ ಅವರ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ. ಅವರು ದಲಿತ ಹಾಗೂ ಬ್ರಾಹ್ಮಣ ಸಮುದಾಯದ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಅವರ ವಿರುದ್ಧ ಕೇಸ್ ದಾಖಲಾದರು ಅದನ್ನು ಡಿಕೆಶಿ ಸಮರ್ಥಿಸಿ ಕೊಂಡು ಕ್ಲೀನ್ ಚೀಟ್ ನೀಡಿದ್ದಾರೆ. ಒಂದು ಕಡೆ ವೋಟಿಗಾಗಿ ದಲಿತರ ಬಗ್ಗೆ ಮೊಸಳೆ ಕಣ್ಣೀರು ಹಾಕಿ ನಾಟಕ ಮಾಡ್ತಾರೆ. ಕಾಂಗ್ರೆಸ್ ನವರ ನಿಜಬಣ್ಣ ದಲಿತರು ಸೇರಿದಂತೆ ರಾಜ್ಯದ ಜನರಿಗೆ ಗೊತ್ತಾಗಿದೆ. ಸುಧಾಕರ್ ಮೇಲೆ ಕಾನೂನು ಕ್ರಮ ಕೈಗೊಂಡು ಅವರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತೇವೆ ಎಂದರು.

ಇದನ್ನೂ ಓದಿ : Karntaka BJP : ಕಾಂಗ್ರೆಸ್‌ ಬಂದಿದೆ-ಬರಗಾಲ ತಂದಿದೆ : ಬಿಜೆಪಿ

ಚೈತ್ರಾ ಕುಂದಾಪುರ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಚೈತ್ರಾ ಅವರ ಮೇಲೆ ಎಫೈರ್ ಆಗಿ ಅವರ ಬಂಧನವು ಆಗಿದೆ. ಕಾನೂನು ಪ್ರಕಾರ ವಿಚಾರಣೆ ಆಗಲಿದೆ, ಇದರಲ್ಲಿ ನಮ್ಮದೇನು ಅಭ್ಯಂತರವಿಲ್ಲ ಎಂದಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ವಿಚಾರದ ಬಗ್ಗೆ ಮಾತನಾಡಿರುವ ಅವರು, ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿದೆ. ಸರ್ಕಾರದಿಂದ ಮಾಡಬೇಕಾದ ಕೆಲಸ ರೈತ ಸಂಘ ಮಾಡುತ್ತಿದೆ. ಇವತ್ತು ರೈತಸಂಘ ಸುಪ್ರೀಂ ಕೋರ್ಟ್ ಗೆ ಇಂಪ್ಲೀಡಿಂಗ್ ಅರ್ಜಿ ಸಲ್ಲಿಸಿದೆ. ಸರ್ಕಾರದ ಬಗ್ಗೆ ರೈತರು ವಿಶ್ವಾಸ ಕಳೆದುಕೊಂಡಿದ್ದಾರೆ. ಕಾವೇರಿ ನೀರು ಹರಿವಿನ ವಿಚಾರದ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಕೇಳಿಕೊಂಡರು.

ಇದನ್ನೂ ಓದಿ : ಕಾವೇರಿ ವಿವಾದದಲ್ಲಿ ಪ್ರಧಾನಿಯನ್ನು ಎಳೆಯೋದು ಬೇಡ: ಪ್ರತಾಪ್ ಸಿಂಹ

ಮುಂದುವರಿದು ಮಾತನಾಡಿದ ಅವರು, ಸದ್ಯ ಮಳೆಯ ಅಭಾವದಿಂದ ರಾಜ್ಯದ ಕೆಲವು ಭಾಗದಲ್ಲಿ ಬರಗಾಲದ ತೀವ್ರತೆ ಆವರಿಸಿದೆ. ಇದರಿಂದ ರೈತರ ಆತ್ಮವಿಶ್ವಾಸ ಕುಸಿಯುತ್ತಿದೆ. ಕಂದಾಯ ಸಚಿವರು ವಾರದಲ್ಲೇ ಬರ ಘೋಷಣೆ ಮಾಡ್ತಿವಿ ಅಂದ್ರು ಆದರೆ ಈವರೆಗೆ ಬರ ಘೋಷಣೆ ಮಾಡಿಲ್ಲ. ರೈತರು ಆಕಾಶ ನೋಡ್ತಿದ್ದಾರೆ. ಮಳೆ ಇಲ್ಲ, ಬಿತ್ತಿದ ಬೆಳೆ ಇಲ್ಲ. ಇದಕ್ಕಾಗಿ ಪರಿಹಾರ ಸಿಗದೆ ರೈತರು ಆತ್ಮಹತ್ಯೆ ಮಾಡಿ ಕೊಳ್ತಾ ಇದ್ದಾರೆ ಎಂದು ಆರೋಪಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles