ಬೆಂಗಳೂರು: ಸಿದ್ದರಾಮಣ್ಣನವರೇ ನನ್ನನ್ನ ಸೋಲಿಸೋದು ಪಕ್ಕಕ್ಕೆ ಇಡಿ. ಇದು ನಿಮ್ಮ ಅಂತಿಮಯಾತ್ರೆ ಇದು ನಿಮಗೆ ಕೊನೆ ಚುನಾವಣೆ ಎಂದು ಸಚಿವ ಸುಧಾಕರ್ ಕಿಡಿಕಾರಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ನಾನು ನಿಮ್ಮ ರೀತಿಯಲ್ಲಿ ಹೇಳೋದಿಲ್ಲ ಈ ಸಲನೂ ನೀವು ಗೆಲ್ಲರಿ, ನಾನು ಸೋಲಿ ಅಂತ ಹೇಳಲ್ಲ. ಯಾಕೆ ಅಂದ್ರೆ ನಾನು 5 ವರ್ಷ ನಿಮ್ಮ ಜೊತೆ ವಿಶ್ವಾಸದಿಂದ ಇದ್ದೆ ಅದಕ್ಕೆ ಗೌರವವಿದೆ ಎಂದರು.
ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮ ಪ್ರಜೆಗಳ ಧ್ವನಿ ಆಗಿರಲಿಲ್ಲ. ಸುಧಾಕರ್ ತೆಗಳಲು ಮಾಡಿದ ಧ್ವನಿ ಆಗಿತ್ತು , ವೈಯುಕ್ತಿಕವಾಗಿ ಟಾರ್ಗೆಟ್ ಮಾಡಿದ್ರು. ಸಿದ್ದರಾಮಯ್ಯನವರು ಮಾತನಾಡಿ ದಮ್ಮಯ್ಯ ಸುಧಾಕರ್ ನ ಸೋಲಿಸಿ ಅಂತ ಕೈ ಮುಗಿದು ಕೇಳಿಕೊಂಡ್ರು.
ನಾನು ವೈಯಕ್ತಿಕ ದ್ವೇಷ ಮಾಡಲ್ಲ. ಆದರೆ ಯಾವ ಕಾರಣಕ್ಕೆ ಸೋಲಿಸಬೇಕು ಅಂತ ಹೇಳಿ. ಬಡವರಿಗೆ ಉಚಿತ ನಿವೇಶನ ಕೊಟ್ಟಿರೋದಕ್ಕಾ? ಪ್ರತಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದಕ್ಕಾ? ಡಿಕೆಶಿ ವಿರುದ್ಧ ಹೋರಾಡಿ ಮೆಡಿಕಲ್ ಕಾಲೇಜು ತಂದಿದಕ್ಕಾ ಅಂತ ಪ್ರಶ್ನಿಸಿದರು.
ಹಳ್ಳಿ ಭಾಷೆಯಲ್ಲಿ ಮಾತನಾಡ್ತಿರಲ್ಲ. ಆ ಹಳ್ಳಿ ಭಾಷೆ ನಿಮಗಿಂತ ನನಗೆ ಚೆನ್ನಾಗಿ ಬರುತ್ತೆ. ಆದರೆ ನಮ್ಮ ಮನೆಯಲ್ಲಿ ನನಗೆ ಸಂಸ್ಕಾರ ಕಲಿಸಿದ್ದಾರೆ ಎಂದು ಗರಂ ಆದರು.