ಬೆಂಗಳೂರು : ಕಾಂಗ್ರೆಸ್ ನಾಯಕರಲ್ಲಿ ಯಾವುದೇ ಐಕ್ಯತೆ ಇಲ್ಲ. ಎಲ್ಲರೂ ಒಂದೆಡೆ ಸೇರಿದಾಗ ಒಗ್ಗಟ್ಟಾಗಿ ಇರುವುದಾಗಿ ಹೇಳುತ್ತಾರೆ. ಆದರೆ, ಸ್ಥಳ ಬಿಟ್ಟ ನಂತರ ಯಾರ ಕಾಲು ಹೇಗೆ ಎಳೆಯಬೇಕು ಎಂದು ಆಲೋಚಿಸುತ್ತಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ಕೊಟ್ಟಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ನಲ್ಲಿ ಒಗ್ಗಟ್ಟಿಲ್ಲ, ಕಾಲು ಎಳೆಯೋದು ಅನೇಕ ವರ್ಷಗಳಿಂದ ನಡೆದು ಕೊಂಡು ಬಂದಿದೆ ಅದನ್ನು ನಾನು ನೋಡಿದ್ದೇನೆ. ಈಗಲೂ ಅದೇ ನಡೆಯುತ್ತಿದೆ, ಮುಂದೆಯೂ ಅದೇ ನಡೆಯುತ್ತೆ ಎಂದರು.
ಇನ್ನೂ ಬಿಎಸ್ ವೈ ಹಾಗೂ ಬಸವರಾಜ್ ಬೊಮ್ಮಾಯಿ ಮುನಿಸು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಯಡಿಯೂರಪ್ಪ ಬೊಮ್ಮಾಯಿ ಸಂಬಂಧ ತಂದೆ – ಮಗನಂತಿದೆ. ಕಾಂಗ್ರೆಸ್ ನವರು ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಇಂತಹುದನ್ನು ಹುಟ್ಟು ಹಾಕ್ತಾರೆ ಎಂದು ಹೇಳಿದರು. ಕಾಂಗ್ರೆಸ್ ನಿಂದ ಕೆಲವು ಶಾಸಕರು ಮತ್ತೆ ಬಿಜೆಪಿಗೆ ಸೇರಲಿದ್ದಾರೆ. ಆದರೆ ಎಷ್ಟು ಜನ ಕಾಂಗ್ರೆಸ್ ಶಾಸಕರು ಬರಲಿದ್ದಾರೆ ಎಂಬ ಮಾಹಿತಿ ನನಗೆ ಗೊತ್ತಿಲ್ಲ ಎಂದರು.
ಮುಂದಿನ ವಿಧಾನಸಭೆ ಚುನಾವಣೆ ಮುಂದಿನ ವರ್ಷದ ಮೇ ಎರಡನೇ ವಾರದಲ್ಲಿ ನಡೆಯಲಿದೆ ಎಂದು ಭಾವಿಸಿದ್ದೇನೆ. ಆದರೆ, ಚುನಾವಣೆ ಮುಖ್ಯ ಆಯುಕ್ತರ ತೀರ್ಮಾನ ಅಂತಿಮವಾಗಿ ಇರಲಿದೆ. ಆದರೆ ಚುನಾವಣೆ ಯಾವಾಗ ಬಂದರೂ ಸ್ಪಷ್ಟ ಬಹುಮತದಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.