Thursday, June 8, 2023
spot_img
- Advertisement -spot_img

ಮಗನ ಮದುವೆಗೆ ಬನ್ನಿ: ಪ್ರಧಾನಿಗೆ ಸಂಸದೆ ಸುಮಲತಾ ಆಹ್ವಾನ

ಬೆಂಗಳೂರು: ಸಂಸದೆ, ನಟಿ ಸುಮಲತಾ ಪುತ್ರ ಅಭಿಷೇಕ್​ ಅಂಬರೀಶ್​ ಮದುವೆಗೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸಲಾಗಿದೆ. ಪಿಎಂ ಮೋದಿ ಅವರನ್ನು ಭೇಟಿ ಮಾಡಿರುವ ಅಮ್ಮ ಮಗ, ಭೇಟಿಯ ಫೋಟೋಗಳನ್ನು ಸುಮಲತಾ, ಅಭಿಷೇಕ್​ ಸಾಮಾಜಿಕ ಜಾಲತಾದಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್ಟರ್ ನಲ್ಲಿ ಟ್ವಿಟ್ ಮಾಡಿ ದೇಶದ ನಾಯಕನ ಬಗ್ಗೆ ಹಾಡಿ ಹೊಗಳಿದ್ದಾರೆ.

ವಿಶ್ವದ ಅತ್ಯಂತ ಜನಪ್ರಿಯ ಮತ್ತು ಗೌರವಾನ್ವಿತ ಹಾಗೂ ದೇಶದ ಪ್ರಗತಿಗಾಗಿ ಸದಾ ಸಮರ್ಪಣಾ ಮನೋಭಾವ ಹೊಂದಿರುವ ನಾಯಕರಿಂದ ಪುತ್ರ ಅಭಿಷೇಕ್ ಅಂಬರೀಶ್ ಅವರು ಆಶೀರ್ವಾದ ಪಡೆಯುವಂತಹ ಸೌಭಾಗ್ಯವನ್ನು ಇಂದು ಪಡೆದರು” ಎಂದು ಟ್ವೀಟ್ ಆರಂಭಿಸಿದ್ದಾರೆ. ಅಂದಹಾಗೆ ಮದುವೆ ಜೂನ್‌ನಲ್ಲಿ ನಡೆಯಲಿದೆ ಅನ್ನೋ ಮಾಹಿತಿ ತಿಳಿದು ಬಂದಿದೆ. ಈ ವೇಳೆ ಅಭಿಷೇಕ್‌ ಅಂಬರೀಷ್ ಜೊತೆಯಲ್ಲಿದ್ದು, ಮೋದಿಯವರನ್ನು ಭೇಟಿ ಮಾಡಿದ್ದಕ್ಕೆ ಸಂತಸ ಹಂಚಿಕೊಂಡಿದ್ಧಾರೆ.

Related Articles

- Advertisement -spot_img

Latest Articles