ಮುಂಬೈ: ನರೇಂದ್ರ ಮೋದಿ ಸರ್ಕಾರವು ಸೂರ್ಯನಿಗೂ ನೌಕೆ ಕಳುಹಿಸಬಹುದು, ಆದರೆ ಮೊದಲು ದೇಶದಲ್ಲಿ ಈರುಳ್ಳಿ ಸಮಸ್ಯೆಯತ್ತ ಗಮನಹರಿಸಬೇಕು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಕಟಗೊಂಡಿರುವ ಸಂಪಾದಕೀಯದಲ್ಲಿ ಟೀಕಿಸಿದೆ.
‘ದೇಶದ ಜನರು ಮೂನ್ ಮಿಷನ್, ಸನ್ ಮಿಷನ್ ಮತ್ತು ಶುಕ್ರ ಮಿಷನ್‌ನಂತಹ ಹೊಸ ಮಿಷನ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸನ್ ಮಿಷನ್ ಎಲ್ಲವೂ ಚೆನ್ನಾಗಿದೆ, ಆದರೆ ರಾಜ್ಯದಲ್ಲಿ ಈರುಳ್ಳಿ ಸಮಸ್ಯೆಯನ್ನು ಬಗೆಹರಿಸುವುದು ಬಹಳ ಅವಶ್ಯಕ’ ಎಂದು ಸಂಪಾದಕೀಯದಲ್ಲಿ ಟೀಕಿಸಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಗ್ರೀಸ್‌ನ ಪ್ರತಿಷ್ಠಿತ ಪ್ರಶಸ್ತಿ!
ಈರುಳ್ಳಿ ದರ ಕಡಿತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಫ್ತಿನ ಮೇಲೆ ತೆರಿಗೆ ವಿಧಿಸಿದೆ. ಈ ಕ್ರಮವನ್ನು ಟೀಕಿಸಿರುವ ಸಾಮ್ನಾ, ‘ನೀವು ಸೂರ್ಯನಿಗೆ ಮಿಷನ್ ಕಳುಹಿಸುತ್ತೀರಿ, ಆದರೆ ಅದಕ್ಕೂ ಮೊದಲು ಈರುಳ್ಳಿ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಿ ಇಲ್ಲದಿದ್ದರೆ 2024ರ ನಿಮ್ಮ ಮಿಷನ್ ಹಾಳಾಗುತ್ತದೆ’ ಎಂದಿದೆ.
ದೇಶದಲ್ಲಿ ಈರುಳ್ಳಿ ದರ ಏರಿಕೆಯಾಗುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರ ರಫ್ತಿನ ಮೇಲೆ ಶೇ.40ರಷ್ಟು ತೆರಿಗೆ ವಿಧಿಸಿ ಆದೇಶಿಸಿತ್ತು. ಹೀಗಾಗಿ ರೈತರು ಪ್ರತಿಭಟನೆಗಿಳಿದಿದ್ದು, ನಾಸಿಕ್‌ನಲ್ಲಿ ಎಪಿಎಂಸಿ ಮಾರುಕಟ್ಟೆಯನ್ನು ಬಂದ್ ಮಾಡಿದ್ದರು. ಏಷ್ಯಾದ ಅತೀ ದೊಡ್ಡ ಈರುಳ್ಳಿ ಮಾರುಕಟ್ಟೆ ಇದಾಗಿದ್ದು, ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.