ಬೆಂಗಳೂರು: ದೇಶದ ಐಕ್ಯತೆ ಕಾಪಾಡಿರುವುದರಲ್ಲಿ ಸುನ್ನಿ ವಿದ್ಯಾರ್ಥಿಗಳ ಕೊಡುಗೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ನಡೆದ ಎಸ್‌ಎಸ್‌ಎಫ್ ಸಂಘಟನೆಯ ‘ಗೋಲ್ಡನ್ ಫಿಫ್ಟಿ’ ಮಹಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಾತಿ, ಧರ್ಮದ ಆಧಾರದ ಮೇಲೆ ಪಂಗಡ ಮಾಡಬಾರದು. ಎಲ್ಲರಿಗೂ ಸಮಾನ ಹಕ್ಕು ನಮ್ಮ ಸಂವಿಧಾನ ನೀಡಿದೆ ಎಂದರು.
ಸಂಘಟನೆ 50 ವರ್ಷ ಪೂರೈಸಿದ್ದು ಬಹಳ ಸಂತೋಷ ತಂದಿದೆ. ನಮ್ಮೆಲ್ಲರ ಜವಾಬ್ದಾರಿ ಈ ದೇಶದ ಐಕ್ಯತೆಯನ್ನು ಕಾಪಾಡೋದು. ಇದಕ್ಕೆ ಸುನ್ನಿ ವಿದ್ಯಾರ್ಥಿಗಳ ಕೊಡುಗೆಯೂ ಇದೆ. ನಾವೆಲ್ಲ ಈ ದೇಶದಲ್ಲಿ ಒಂದೇ ತಾಯಿ ಮಕ್ಕಳಂತೆ ಬಾಳಲು ಸುನ್ನಿ ಮಕ್ಕಳು ಸಹಕಾರ ನೀಡಿದ್ದಾರೆ. ನಿಮ್ಮೆಲ್ಲರ ಸಹಕಾರದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದರು.
ಇದನ್ನೂ ಓದಿ: ಸನಾತನ ಧರ್ಮ ಅಂದರೆ ಬದಲಾದ ಧರ್ಮ: ಪ್ರಕಾಶ್ ರೈ
ಇಂತಹ ಸಂಘಟನೆ ನಾನೆಂದು ನೋಡಿಲ್ಲ: ಡಿಕೆಶಿ
ನಿಮ್ಮ ಜೊತೆ ನಮ್ಮ ಸರ್ಕಾರ ಇದೆ ಅನ್ನೋದನ್ನ ಹೇಳೋಕೆ ನಾನು ಬಂದಿದ್ದೇನೆ. ನಾನೆಂದಿಗೂ ಇಂತಹ ಸಂಘಟನೆ ನೋಡಿಲ್ಲ. ಸಾವಿರಾರು ಪ್ರೋಗ್ರಾಂ ನೋಡಿದ್ದೀನಿ ಮಳೆ ಬಂದ್ರು ನೀವು ಸ್ವಾತಂತ್ರ್ಯ ಹೋರಾಟಗಾರಂತೆ ಕುಳಿತ್ತಿದ್ದೀರಾ. ನಮ್ಮ ಮನೆ ಹಾಗೂ ನಮ್ಮ ಸರ್ಕಾರದ ಬಾಗಿಲು ಯಾವಾಗ್ಲೂ ಕೂಡ ನಿಮಗೋಸ್ಕರ ತೆರೆದಿರುತ್ತೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ಜಾತ್ಯತೀತ ತತ್ವಗಳ ನೆಲೆಯಲ್ಲಿ ಕೆಲಸ ಮಾಡಿ; ಖಾದರ್
ಸತತ 50 ವರ್ಷಗಳಲ್ಲಿ ಸಮುದಾಯದ ಗೌರವ ಹೆಚ್ಚಿಸಿದ ಎಸ್‌ಎಸ್‌ಎಫ್‌ಗೆ ಅಭಿನಂದನೆಗಳು. ಅತ್ಯಂತ ಗೌರವಿದೆ, ನಮ್ಮ ಸಮುದಾಯಕ್ಕೆ ಯಾವುದೇ ಕಪ್ಪು ಚುಕ್ಕೆ ತರದೆ ಪ್ರತಿಹಂತದಲ್ಲಿ ಸಮುದಾಯದ ಗೌರವ ಹೆಚ್ಚಿಸಿದ್ದೀರಾ. ಮುಂದಿನ 50 ವರ್ಷಗಳಲ್ಲಿ ದೇಶದ ಸಂವಿಧಾನವನ್ನು ಎತ್ತಿಹಿಡಿದು ಸುಧಾರಣೆಗೊಳಿಸಿ. ಯಾವುದೇ ಕೋಮುವಾದಿ ಶಕ್ತಿಗಳಿಗೆ ಅವಕಾಶ ನೀಡದೆ ಜಾತ್ಯತೀತ ತತ್ವಗಳ ನೆಲೆಯಲ್ಲಿ ಸಂವಿಧಾನ ಎತ್ತಿಹಿಡಿದು ಕೆಲಸ ಮಾಡಬೇಕು ಎಂದು ಸ್ಪೀಕರ್ ಖಾದರ್ ಕರೆ ನೀಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.