ಬೆಂಗಳೂರು: ಇಂದು ವಿಧಾನಸೌಧದ ಮುಂದೆ ಅಪ್ಪುಗೆ ಕರ್ನಾಟಕ ರತ್ನ ಗೌರವ ಅರ್ಪಿಸಲು ಎಲ್ಲಾ ಸಿದ್ಧತೆಗಳೂ ಆಗ್ತಿದೆ. ವಿಧಾನಸೌಧಕ್ಕೆ ಕಲರ್ ಫುಲ್ ಆಗಿ ಸಿಂಗಾರ ಮಾಡಲಾಗಿದೆ. ಸರ್ಕಾರದ ಹಲವು ಯೋಜನೆಗಳಿಗೆ ಬೆನ್ನೆಲುಬಾಗಿದ್ದ ಅಪ್ಪುಗೆ ಬೊಮ್ಮಾಯಿ ಸರ್ಕಾರ ಕರ್ನಾಟಕ ರತ್ನ ನೀಡಲು ಸಿದ್ದತೆ ನಡೆಸಿದೆ.
ಇನ್ನೂ ಇಂಡಿಯನ್ ಸೂಪರ್ ಸ್ಟಾರ್, ಅಭಿಮಾನಿಗಳ ತಲೈವಾ ರಜನಿಕಾಂತ್ ಬೆಂಗಳೂರಿಗೆ ಬಂದಿಳಿದಿದ್ದಾರೆ. ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಸೂಪರ್ ಸ್ಟಾರ್ ಬಂದಿಳಿದಿದ್ದಾರೆ.ರಜನಿಕಾಂತ್ ಅವರನ್ನ ಸರ್ಕಾರದ ವತಿಯಿಂದ ಕೆ. ಸುಧಾಕರ್ ಬರಮಾಡಿಕೊಂಡರು. ರಜನಿಕಾಂತ್ ಅವರಿಗೆ ಹೂಗುಚ್ಛ ನೀಡಿ ಸ್ವಾಗತ ಮಾಡಲಾಯಿತು. ಇನ್ನೂ ಸಂಜೆ ವೇಳೆಗೆ ವಿಧಾನಸೌಧಕ್ಕೆ ರಜನಿಕಾಂತ್ ಬರಲಿದ್ದಾರೆ.
VIP ಹಾಗೂ VVIP ಗಳಿಗೆ ಪ್ರತ್ಯೇಕವಾದ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಮೇಲೆ ಕೇವಲ 20 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಿಎಂ, ಗೃಹ ಸಚಿವರು, ಪುನೀತ್ ಪತ್ನಿ ಅಶ್ವಿನಿ ರಜನಿಕಾಂತ್ , ಎನ್ಟಿಆರ್ ಆರ್ ಅಶೋಕ್ ಸೇರಿ ಆಯ್ದ ಸಚಿವರಿಗೆ ಮಾತ್ರ ವೇದಿಕೆ ಮೇಲೆ ಅವಕಾಶ ಕಲ್ಪಿಸಲಾಗಿದೆ.
ತೆಲುಗು ನಟ ಹಾಗೂ ಪುನೀತ್ ರಾಜ್ಕುಮಾರ್ ಗೆಳೆಯ ಜೂನಿಯರ್ ಎನ್ಟಿಆರ್ ಕೂಡ ಬೆಂಗಳೂರಿಗೆ ಬರಲಿದ್ದಾರೆ.