Sunday, October 1, 2023
spot_img
- Advertisement -spot_img

ಸೂಪರ್‌ ಸ್ಟಾರ್‌ ಆದ್ರೂ ಸಾರಿಗೆ ಇಲಾಖೆಯನ್ನ ಮರೆಯದ ತಲೈವಾ..!

ಬೆಂಗಳೂರು: ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರು ಮೂಲತಃ ಕರ್ನಾಟಕದವರು. ನಟನೆಗೂ ಮುನ್ನ ಅವರು ಬೆಂಗಳೂರಿನಲ್ಲಿ ಬಸ್‌ ಕಂಡಕ್ಟರ್‌ ಆಗಿಯೂ ಕೆಲಕಾಲ ಕರ್ತವ್ಯ ನಿರ್ವಹಿಸಿದ್ದರು. ಈಗ ಚಿತ್ರರಂಗದಲ್ಲಿ ಉತ್ತುಂಗಕ್ಕೇರಿರುವ ಅವರು ಬೆಂಗಳೂರನ್ನು ಇಂದಿಗೂ ಮರೆತಿಲ್ಲ.

ಇಂದು ಬೆಂಗಳೂರಿನ ಜಯನಗರದ ಬಿಎಂಟಿಸಿ ಡಿಪೋಗೆ ರಜನಿಕಾಂತ್ ಅವರು ದಿಢೀರ್‌ ಭೇಟಿ ನೀಡಿದ್ದು, ಅವರ ಆಗಮನ ಅಲ್ಲಿದ್ದವರಿಗೆ ಸರ್ಪ್ರೈಸ್ ತಂದಿದೆ. ಡಿಪೋ ಸಿಬ್ಬಂದಿ ಜೊತೆಗೆ ಕೆಲಕಾಲ ಮಾತುಕತೆ ನಡೆಸಿ, ಡಿಪೋ ಒಳಗೆ ಸುತ್ತಾಡಿದರು.

ಇತ್ತೀಚೆಗಷ್ಟೇ ರಜಿನಿಕಾಂತ್‌ ಅವರು ಅಭಿನಯಿಸಿದ್ದ ಜೈಲರ್‌ ಸಿನಿಮಾ ಸಖತ್‌ ಹಿಟ್‌ ಆಗಿದ್ದು, ಈ ಸಕ್ಸಸ್‌ ನಡುವೆಯೇ ರಜಿನಿ ಅವರು ಬೆಂಗಳೂರಿನ ಡಿಪೋಗೆ ಭೇಟಿ ನೀಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಇನ್ನು ರಜಿನಿಕಾಂತ್‌ ಅವರು ತಮ್ಮ ಕಂಡಕ್ಟರ್‌ ವೃತ್ತಿಯ ಆ ದಿನಗಳನ್ನು ಮೆಲುಕು ಹಾಕಿದರು.

ಇನ್ನು ರಜನಿಕಾಂತ್ ಸರಳತೆ ಸ್ವಭಾವ ಕಂಡು ಸಾರಿಗೆ ಸಿಬ್ಬಂದಿ ಫುಲ್‌ ಖುಷ್‌ ಆಗಿದ್ದಾರೆ. ಬಳಿಕ ಅಲ್ಲಿಂದ ಖಾಸಗಿ ಕಾರ್ಯಕ್ರಮವೊಂದಕ್ಕೆ ರಜಿನಿಕಾಂತ್‌ ತೆರಳಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles