ಹಾವೇರಿ: ಬಿಜೆಪಿ ಹೆಸರನ್ನು ಭಾರತೀಯ ಜನತಾ ಪಾರ್ಟಿ ಅನ್ನೋ ಬದಲು ಭ್ರಷ್ಟ ಜನತಾ ಪಾರ್ಟಿ ಅಂತಾ ಕರೀಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಜಾತಿ ಧರ್ಮ ಮೀರಿ ಕಾಂಗ್ರೆಸ್ ಪ್ರತಿ ಕುಟುಂಬದ ಯಜಮಾನಿಗೆ ಎರಡುಸಾವಿರ ರೂಪಾಯಿ ನೀಡಲು ಚಿಂತಿಸಿದೆ, ಜೊತೆಗೆ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಪೂರೈಕೆ ಮತ್ತು ಪ್ರತಿ ಬಿಪಿಎಲ್ ಸದಸ್ಯನಿಗೆ ತಲಾ 10 ಕೆಜಿ ಅಕ್ಕಿ ನೀಡುವ ಯೋಜನೆ ಜಾರಿಗೆ ತರಲಿದೆ ಎಂದು ತಿಳಿಸಿದರು.
ಭ್ರಷ್ಟ ಬೊಮ್ಮಾಯಿ ಸರ್ಕಾರಕ್ಕೆ ಭ್ರಷ್ಟ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧಿಸಲಾಗುತ್ತಿಲ್ಲ, ಇದರಿಂದ ಗೊತ್ತಾಗುತ್ತೆ ಬೊಮ್ಮಾಯಿ ಸರ್ಕಾರ ಅಪರಾಧಿಗಳ ಪರವಾಗಿದೆ ಎಂದು ಆರೋಪಿಸಿದರು. ಸಿಎಂ ಬೊಮ್ಮಾಯಿ ಪ್ರತಿಬಾರಿ 40 ಪರ್ಸೆಂಟ್ ಆರೋಪ ಮಾಡಿದಾಗ ದಾಖಲಾತಿ ಕೊಡಿ ಎನ್ನುತ್ತಿದ್ದರು.
ಈಗ ಲೋಕಾಯುಕ್ತವೇ ಅಕ್ರಮವಾದ 8 ಕೋಟಿ ರೂಪಾಯಿ ವಶಪಡಿಸಿಕೊಳ್ಳುವ ಮೂಲಕ ದಾಖಲೆ ನೀಡಿದೆ ಎಂದು ಆರೋಪಿಸಿದರು. ಬಿಜೆಪಿ ಈಗ ಹೇಳಲಿ ಬೊಮ್ಮಾಯಿ, ಜ್ಞಾನೇಂದ್ರ ಮತ್ತು ನಿರಾಣಿ ಯಾವಾಗ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಾರೆ ಎಂದು ಪ್ರಶ್ನಿಸಿದರು.