ಉಡುಪಿ: ರಾಜ್ಯದಲ್ಲಿರೋದು ಡಬಲ್ ಎಂಜಿನ್ ಸರ್ಕಾರ ಅಲ್ಲ, ಡಬಲ್ ಕರಪ್ಶನ್ ಸರ್ಕಾರ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ಸಿಎಂ ಆಗಲು ಎಷ್ಟು ಹಣ ಕೊಟ್ಟಿದ್ದಾರೆ ಎಂದು ಮೋದಿ, ನಡ್ಡಾ ಉತ್ತರಿಸಲಿ ಎಂದು ಕಿಡಿಕಾರಿದರು. ಬೊಮ್ಮಾಯಿ ನೇತೃತ್ವದ ಸರಕಾರದ 40 ಪರ್ಸೆಂಟ್ ಭ್ರಷ್ಟಾಚಾರ ಕುರಿತು ಇಡೀ ದೇಶ ಮಾತನಾಡುತ್ತಿದೆ. ‘ಬಸವರಾಜ ಬೊಮ್ಮಾಯಿ ದೇಶದ ಎಲ್ಲಿಗೆ ಹೋದರೂ ಅವರನ್ನು ಪೇಸಿಎಂ ಎಂದು, ಬಿಜೆಪಿ ಸರ್ಕಾರವನ್ನು ಶೇ 40ರಷ್ಟು ಕಮಿಷನ್ ಪಡೆಯುವ ಸರ್ಕಾರ ವೆಂದೂ ಕರೆಯುತ್ತಾರೆ.
ಇದು ಕೇವಲ ಕಾಂಗ್ರೆಸ್ ಪಕ್ಷದ ಆರೋಪವಲ್ಲ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶೇ 1ರಷ್ಟೂ ಕಮಿಷನ್ ಪಡೆಯುವುದಿಲ್ಲ. ಈಗ ಇರುವ ಶೇ 40ರಷ್ಟು ಕಮಿಷನ್ ಪಡೆಯುವ ಆರೋಪ ಹೊತ್ತ ಸರ್ಕಾರ ವನ್ನು ತೆಗೆಯಬೇಕಾದರೆ ಕಾರ್ಯ ಕರ್ತರು ಒಂದು ವಾರದಲ್ಲಿ ಪ್ರತಿ ಮನೆಗೂ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಿಸಬೇಕು’ ಎಂದು ವಿನಂತಿಸಿದರು.