ಬೆಂಗಳೂರು: ಸತತ ಆರು ತಿಂಗಳಿನಿಂದ ಪಡಿತರ ಪಡೆಯದ ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಸರ್ಕಾರ ಮುಂದಾಗಿದೆ.
ಹೀಗಾಗಿ ಹೊಸ ಪಡಿತರ ಚೀಟಿಗಳನ್ನು ವಿತರಿಸಿದಷ್ಟೇ ಸಂಖ್ಯೆಯಲ್ಲಿ ಹಳೆಯ ಪಡಿತರ ಚೀಟಿಗಳನ್ನು ರದ್ದುಪಡಿಸಬೇಕು ಎಂಬ ಆದೇಶ ಈಗ ಅಧಿಕಾರಿಗಳನ್ನು ಸಂಕಷ್ಟದಲ್ಲಿ ಸಿಲುಕಿಸಿದೆ. ಆರು ತಿಂಗಳಿನಿಂದ ರೇಷನ್ ಪಡೆಯದ ಬಿಪಿಎಲ್, ಅಂತ್ಯೋದಯ ಮತ್ತು ಪಿಎಚ್ಎಚ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಪ್ರೀತಿ ವಂಚನೆ ಆರೋಪ; ಸಂಸದ ದೇವೇಂದ್ರಪ್ಪ ಮಗನ ವಿರುದ್ದ ಎಫ್ಐಆರ್ ದಾಖಲು
ಆರು ತಿಂಗಳಿನಿಂದ 3.26 ಲಕ್ಷ ಕುಟುಂಬಗಳು ಪಡಿತರ ಪಡೆದುಕೊಂಡಿಲ್ಲ ಎಂದು ತಿಳಿದುಬಂದಿದೆ. ಬಿಪಿಎಲ್ ಹಾಗೂ ಅಂತ್ಯೋದಯದ ಮೇಲೆ ಗೃಹಲಕ್ಷ್ಮಿ ಆಯುಷ್ಮಾನ್ ಆರೋಗ್ಯ ಚಿಕಿತ್ಸೆಯ ಹಣ ಮತ್ತು ಇತರ ಸಾಲ ಸೌಲಭ್ಯ ನೀಡಲಾಗುತ್ತದೆ. ಪಡಿತರ ಚೀಟಿ ಸಂಖ್ಯೆ ಹೆಚ್ಚಳವಾದ್ರೆ ಸರ್ಕಾರಕ್ಕೆ ಹೊರೆಯಾಗುವ ಕಾರಣ ಪಡಿತರ ಕಾರ್ಡ್ ಗಳ ಸಂಖ್ಯೆ ಹೆಚ್ಚಾಗದಂತೆ ನೋಡಿಕೊಳ್ಳಲಾಗಿದೆ. ಈ ಸಂಬಂಧ ಆಹಾರ ಇಲಾಖೆ ರೇಷನ್ ಪಡೆಯದ ಕುಟುಂಬಗಳ ಎಲ್ಲಾ ಅಂಕಿ ಅಂಶಗಳನ್ನು ಸಂಗ್ರಹಿಸಿಕೊಂಡಿದೆ.
ಇದನ್ನೂ ಓದಿ: ನಾಲ್ಕು ನಗರಗಳಲ್ಲಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ!
ಕಳೆದ ಎರಡು ತಿಂಗಳ ಹಿಂದೆ ಮೃತಪಟ್ಟ ಕಾರ್ಡ್ ಹೊಂದಿರುವ ಫಲಾನುಭವಿಗಳ ಹೆಸರು ಡಿಲೀಟ್ ಮಾಡಿ ರೇಷನ್ ಕಾರ್ಡ್ ಫಲಾನುಭವಿಗಳಿಗೆ ಆಹಾರ ಇಲಾಖೆ ಶಾಕ್ ಕೊಟ್ಟಿತ್ತು. ಇದೀಗ ಕಳೆದ ಆರು ತಿಂಗಳಿನಿಂದ ಅಕ್ಕಿ ಪಡೆಯದ ರೇಷನ್ ಕಾರ್ಡ್ಗಳನ್ನು ಸಸ್ಪೆಂಡ್ ಮಾಡಲು ಆದೇಶ ಹೊರಡಿಸಿದೆ. ಇದರಿಂದ ಆಹಾರ ಇಲಾಖೆಗೆ ಸಾಕಷ್ಟು ಅನುಕೂಲವಾಗಲಿದೆ.
ಇದನ್ನೂ ಓದಿ: ಡೀಪ್‌ಫೇಕ್ ವಿಡಿಯೋಗಳು ದೊಡ್ಡ ಆತಂಕಕಾರಿ ಬೆಳವಣಿಗೆ: ಪ್ರಧಾನಿ ಮೋದಿ
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.