Wednesday, November 29, 2023
spot_img
- Advertisement -spot_img

ಆಡಿಯೋ ವೈರಲ್‌; ಲಂಚ ಪಡೆಯಲು ಸೂಚಿಸಿದ್ರಾ ಬಿಜೆಪಿ ಶಾಸಕ?

ಬೀದರ: ಹತ್ತು ಸಾವಿರ ಲಂಚ ಪಡೆದು ಕೆಲಸ ಮಾಡಿಕೊಡಲು ಬಸವಕಲ್ಯಾಣ ಶಾಸಕ ಶರಣು ಸಲಗರ್ ಸೂಚನೆ ನೀಡಿದ್ದಾರೆ ಎನ್ನಲಾದ ಆಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆಯ ಸಹಾಯಕ ವೆಂಕಟರಾವ್ ಅವರಿಗೆ ದೂರವಾಣಿ ಕರೆ ‌ಮಾಡಿ, ಹತ್ತು ಸಾವಿರ ಲಂಚ‌ ಪಡೆದು, ಅದರಲ್ಲೆ ಕೆಲಸ ಮಾಡಿಕೊಡಲು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ನಮ್ಮ ಪ್ರಣಾಳಿಕೆಗಳನ್ನು ಬಿಜೆಪಿ ಕಾಪಿ ಮಾಡ್ತಿದೆ: ಶಾಮನೂರು ಶಿವಶಂಕರಪ್ಪ

ಬಸವಕಲ್ಯಾಣ ಲೋಕೋಪಯೋಗಿ ಇಲಾಖೆ ದ್ವಿತೀಯ ದರ್ಜೆ ಸಹಾಯಕನಿಗೆ ಕರೆ ಮಾಡಿದ್ದ ಶಾಸಕ ಶರಣು ಸಲಗರ ಆತನ ಜೊತೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಮೊಬೈಲ್‌ನಲ್ಲಿ ಕರೆ ಮಾಡಿ 10 ಸಾವಿರ ಪಡೆದು ಕೆಲಸ ಮಾಡಿಕೊಡಿ ಎಂದು ಶಾಸಕ ಶರಣು ಸಲಗರ ಹೇಳಿರುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಾನು ಲೆಕ್ಕಪತ್ರ ಶಾಖೆಯ ವೆಂಕಟರಾವ್ ಎಂದು ಪ್ರಥಮ ದರ್ಜೆ ಸಹಾಯಕ ಪರಿಚಯಿಸಿಕೊಂಡಿದ್ದಾನೆ. ಆಗ ಶಾಸಕರು, 10 ಸಾವಿರ ತೆಗೆದುಕೊಂಡು ಕೆಲಸ ಮಾಡಿಕೊಡಬೇಕು. ಹೆಚ್ಚಿಗೂ ಬೇಡ, ಕಡಿಮೆಯೂ ತೆಗೆದುಕೊಳ್ಳುವುದು ಬೇಡ ಎಂದು ತಾಕೀತು ಮಾಡಿದ್ದಾರೆ.

ಕಡಿಮೆ ಹಣ ಪಡೆದು ಕೆಲಸ ಮಾಡು, ಅವನಿಗೆ ತೊಂದರೆ ಕೊಡುವುದೂ ಬೇಡ. ಇಲ್ಲದಿದ್ದರೆ ನಾನೇ ಅಲ್ಲಿಗೆ ಬರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ನನ್ನ ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸೋದು ನನ್ನ ಕರ್ತವ್ಯ: ಆಡಿಯೋ ಲೀಕ್ ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಸಲಗರ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನನ್ನ ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸೋದು ನನ್ನ ಕರ್ತವ್ಯ. ಒಂದು ಬಡ ಕುಟುಂಬಕ್ಕೆ ಕೆಲಸ ಮಾಡಿಕೊಡಲು ಸರ್ಕಾರಿ ಅಧಿಕಾರಿ 40 ಸಾವಿರ ರೂಪಾಯಿಗೆ ಬೇಡಿಕೆ ಇರಿಸಿದ್ದರು. ಲಂಚದ ಹಣವನ್ನು ಕಡಿಮೆಗೊಳಿಸಿ 10 ಸಾವಿರ ರೂಪಾಯಿಗೆ ಆ ಕೆಲಸ ಮಾಡಿಕೊಡಿ ಎಂದು ಹೇಳಿದ್ದೇನೆ. ಕೆಲಸ ಆಗಲಿ ಎಂಬ ಸದುದ್ದೇಶ ಮಾತ್ರ ನನ್ನದಾಗಿತ್ತು ಎಂದು ಶಾಸಕರು ಸಮಜಾಯಿಸಿ ನೀಡಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles