ದೊಡ್ಡಬಳ್ಳಾಪುರ: ಮುಂದಿನ ಚುನಾವಣೆಯಲ್ಲಿ ಮತದಾರರು ಬಿಜೆಪಿ ಪಕ್ಷವನ್ನ ಮನೆಗೆ ಕಳಿಸುತ್ತಾರೆ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಧ್ಯಮದೊಂದಿಗೆ ಮಾತನಾಡಿ,ರಾಜ್ಯದ ಪ್ರತಿಯೊಂದು ಇಲಾಖೆಯಲ್ಲಿ ಕಮಿಷನ್ ಇಲ್ಲದೆ ಕೆಲಸ ನಡೆಯುತ್ತಿಲ್ಲ. ಆದರೇ ಮೋದಿ ಹೇಳ್ತಾರೆ ‘ನಾನು ತಿನ್ನುವುದಿಲ್ಲ, ಮತ್ತೊಬ್ಬರಿಗೆ ತಿನ್ನಲು ಬಿಡಲ್ಲ ಎಂದರು. ಇನ್ನು ಪಿಎಸ್ಐ ನೇಮಕಾತಿ ಹಗರಣವನ್ನ ವಿಧಾನಸಭೆಯಲ್ಲಿ ನಾನು ಪ್ರಸ್ತಾಪ ಮಾಡಿದ್ದೇನೆ. ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಡಿಜಿಪಿ ಸೇರಿದಂತೆ ಹೆಚ್ಚು ಜನರ ಬಂಧನವಾಗಿದೆ. ಇಷ್ಟೇಲ್ಲ ಆದರೂ ಅವರು ಏನು ನಡಿದೇ ಇಲ್ಲ ಎಂಬಂತಿದ್ದಾರೆ.
ಮೋದಿ ಯಾವಾಗ್ಲೂ ಹೇಳುತ್ತಾರೆ ನಾನು ತಿನ್ನುವುದಿಲ್ಲ, ಮತ್ತೊಬ್ಬರಿಗೆ ತಿನ್ನಲು ಬಿಡುವುದಿಲ್ಲವೆಂದು ಆದರೆ ಇಂದು ರಾಜ್ಯದಲ್ಲಿ ಕಮಿಷನ್ ಇಲ್ಲದೆ ಯಾವ ಇಲಾಖೆಯಲ್ಲೂ ಕೆಲಸ ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಪಿಎಸ್ಐ ನೇಮಕಾತಿ ಹಗರಣವನ್ನ ವಿಧಾನಸಭೆಯಲ್ಲಿ ನಾನು ಪ್ರಸ್ತಾಪ ಮಾಡಿದ್ದೇನೆ. ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಡಿಜಿಪಿ ಸೇರಿದಂತೆ ಹೆಚ್ಚು ಜನರ ಬಂಧನವಾಗಿದೆ. ಇಷ್ಟೇಲ್ಲ ಆದರೂ ಅವರು ಏನು ನಡಿದೇ ಇಲ್ಲ ಎಂಬಂತಿದ್ದಾರೆ.
ಹಗರಣದ ಹೊಣೆ ಸರ್ಕಾರ ಹೊರುತ್ತಾ, ಇಲ್ಲಾ ಬಿಜೆಪಿ ಪಕ್ಷ ಹೊರುತ್ತಾ ಅಥವಾ ಮುಖ್ಯಮಂತ್ರಿ ಹೊರ್ತಾರಾ, ಇಷ್ಟೆಲ್ಲ ಹಗರಣ ನಡೆದರೂ ಪ್ರಧಾನಿ ಮೋದಿ ಮೌನವಾಗಿದ್ದಾರೆ. ಇದನ್ನೆಲ್ಲ ನೋಡುತ್ತಿದ್ದಾರೆ ಬಿಜೆಪಿ ಪಕ್ಷ ಭ್ರಷ್ಟಾಚಾರದ ಜೊತೆ ರಾಜಿ ಮಾಡಿಕೊಂಡಿರುವಂತೆ ಕಾಣಿಸುತ್ತದೆ ಎಂದರು. ಪ್ರಬುದ್ಧ ಮತದಾರರು ಇದನ್ನೆಲ್ಲ ಗಮನಿಸುತ್ತಿದ್ದಾರೆ. ಭ್ರಷ್ಟಾಚಾರದಿಂದ ಲೂಟಿ ಮಾಡಿದ ಹಣದಲ್ಲಿ ಚುನಾವಣೆ ಗೆಲ್ಲಬಹುದೆಂಬ ಪ್ರಯತ್ನದಲ್ಲಿದ್ದಾರೆಂದು ವಾಗ್ದಾಳಿ ನಡೆಸಿದರು.