ವಿಜಯನಗರ: ಬಿಜೆಪಿ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ವಂಚಿಸಿರುವ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಸಿಸಿಬಿ ಬಂಧನದಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆ ಪ್ರಕರಣದ ಮತ್ತೋರ್ವ ಆರೋಪಿಯಾದ ಅಭಿನವ ಹಾಲಶ್ರೀ ಕುರಿತ ಶಾಕಿಂಗ್ ವಿಚಾರಗಳು ಬಯಲಾಗಿವೆ.
ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಅಭಿನವ ಹಾಲಶ್ರೀ ಸುಮಾರು ಒಂದೂವರೆ ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಣವನ್ನು ಸ್ವಾಮೀಜಿ ಹಲವು ಕಡೆ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಆರ್‌ಎಸ್‌ಎಸ್‌ಗೆ ದೇಶ ಭಕ್ತಿಯ ಇತಿಹಾಸವಿಲ್ಲ : ಪ್ರಿಯಾಂಕ್ ಖರ್ಗೆ
ಹಿರೇಹಡಗಲಿ ಬಳಿ ಸುಮಾರು 8 ಎಕರೆ ಜಮೀನು ಖರೀದಿಸಿದ್ದು, ಅವರ ತಂದೆಯ ಹೆಸರಲ್ಲಿ ನೋಂದಣಿ ಮಾಡಿಸಲಾಗಿದೆ ಎನ್ನಲಾಗಿದೆ. 40 ಲಕ್ಷ ಹಣ ನೀಡಿ ಅರ್ಧ ಎಕರೆ ಜಾಗದಲ್ಲಿ ಪೆಟ್ರೋಲ್ ಬಂಕ್ ನಿರ್ಮಾಣಿಸಿದ್ದಾರೆ. ಇದರ ಜೊತೆ 60 ಲಕ್ಷ ರೂಪಾಯಿಯಲ್ಲಿ 8 ಎಕರೆ ಜಮೀನು ಖರೀದಿಸಿದ್ದಾರೆ. ಆದರೆ ಪೆಟ್ರೋಲ್ ಬಂಕ್ ಚೆಂದ್ರಪ್ಪಾ ಎಂಬುವರ ಹೆಸರಲ್ಲಿದ್ದು, ಕೇವಲ 2 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಇಂದಿನಿಂದ ಸಿಡಬ್ಲ್ಯೂಸಿ ಸಭೆ: ಹೈದರಾಬಾದ್‌ಗೆ ತೆರಳಿದ ಸಿಎಂ ಸಿದ್ದರಾಮಯ್ಯ
ಗೋವಿಂದ ಬಾಬು ನೀಡಿದ್ದ ಹಣ ಎಲ್ಲಾ ಕಡೆ ಹೂಡಿಕೆ ಮಾಡಿದ್ದ ಸ್ವಾಮೀಜಿ ಬಳಿ ಹಣವಿರಲಿಲ್ಲ. ಗೋವಿಂದ ಬಾಬು ಹಣ ವಾಪಸ್ ಕೇಳಿದಾಗ ಇಕ್ಕಟ್ಟಿಗೆ ಸಿಲುಕಿ ಸ್ಪಲ್ಪ ಹಣ ನೀಡಿ ಕೈತೊಳೆದುಕೊಳ್ಳಲು ಸ್ವಾಮೀಜಿ ಮುಂದಾಗಿದ್ದರು ಎಂದು ತಿಳಿದುಬಂದಿದೆ. ಇದಕ್ಕಾಗಿ ಸ್ಥಳೀಯ ಮುಖಂಡರೊಬ್ಬರ ಬಳಿ ಸುಮಾರು 10 ಲಕ್ಷ ರೂಪಾಯಿ ಸಾಲ ಕೇಳಿದ್ದರು. ಆದರೆ ಗೋವಿಂದ ಬಾಬು ದೂರು ನೀಡಿದ್ದರಿಂದ ಈ ಪ್ರಕ್ರಿಯೆ ಅರ್ಧಕ್ಕೆ ನಿಂತಿತ್ತು. ಈಗ ಪ್ರಕರಣ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.