ಹಾಸನ: ಹಾಸನದಲ್ಲಿ ಪ್ರೀತಂ ಗೌಡ ಹಾಗೂ ಸ್ವರೂಪ್ ಪ್ರಕಾಶ್ ನಡುವಿನ ಫೈಟ್ ನಲ್ಲಿ ಇದೀಗ ಸ್ವರೂಪ್ 70,080 ಮತಗಳನ್ನು ಪಡೆದು ಗೆಲುವಿನ ಜಯಭೇರಿಯನ್ನು ಬಾರಿಸಿದ್ದಾರೆ.
ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಸ್ವರೂಪ್ ಪತ್ನಿ ಡಾ.ಶ್ವೇತಾ ಪತಿಯನ್ನು ಅಪ್ಪಿ ಕಣ್ಣೀರಿಟ್ಟು ಶುಭಾಶಯಗಳನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಸ್ವರೂಪ್ ಗೆದ್ದ ಹಿನ್ನೆಲೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಫೋನ್ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ದೇವೇಗೌಡರು ಕರೆ ಮಾಡಿದ ಸಂದರ್ಭದಲ್ಲಿ ಸ್ವರೂಪ್ ಮತ ಎಣಿಕೆ ಕೇಂದ್ರದಲ್ಲಿ ಇದ್ದುದ್ದರಿಂದ ದೇವೇಗೌಡರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.
ರೇವಣ್ಣ ಕುಟುಂಬದ ಯಾರೇ ಸ್ಪರ್ಧಿಸಿದರೂ, 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ ಸವಾಲು ಹಾಕಿದ್ದ ಪ್ರೀತಂ ಗೌಡ ಸೋಲನ್ನು ಅನುಭವಿಸಿದ್ದಾರೆ. ಹೆಚ್ ಡಿಕೆ ಟಿಕೆಟ್ ನೀಡಿದ ಬೆನ್ನಲ್ಲೇ ದೇವೇಗೌಡರು ಮನೆಗೆ ಕರೆಸಿ ಟಾಸ್ಕ್ ನೀಡಿದ್ದರು. ಸ್ವರೂಪ್ ಪ್ರಕಾಶ್ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನೀಡಿದರು. ಅಷ್ಟೇ ಭರ್ಜರಿ ಕ್ಯಾಂಪೇನ್ ಮಾಡಿದ್ದರು.