ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬವನ್ನು ವಿಧಾನಪರಿಷತ್ ಸದಸ್ಯ ಡಾ.ಟಿ.ಎ ಶರವಣ ವಿನೂತನವಾಗಿ ಆಚರಿಸಿದ್ದಾರೆ. ತಮ್ಮ ನಿವಾಸಕ್ಕೆ ಮಹಿಳಾ ಪೌರ ಕಾರ್ಮಿಕರ ಕರೆಸಿ ಬಾಗೀನ ನೀಡಿ ಹಾರೈಸಿದ್ದಾರೆ. 9 ಮಹಿಳಾ ಪೌರ ಕಾರ್ಮಿಕರನ್ನು ತಮ್ಮ ಬನಶಂಕರಿ ನಿವಾಸಕ್ಕೆ ಕರೆಸಿ ಹಬ್ಬ ಆಚರಿಸಿದ್ದಾರೆ. ಈ ವೇಳೆ ತಮ್ಮ 52ನೇ ಹುಟ್ಟುಹಬ್ಬವನ್ನೂ ಸಹ ಆಚರಿಸಿಕೊಂಡಿದ್ದಾರೆ.
ಬಳಿಕ ಮಾತನಾಡಿದ ಅವರು, ಸಮಾಜದಲ್ಲಿ ಎಲ್ಲವನ್ನ ಸ್ವಚ್ಛವಾಗಿ ಇಟ್ಟುಕೊಳ್ಳುವವರು ಪೌರಕಾರ್ಮಿಕರು. ನಿಜವಾದ ಮಹಾಲಕ್ಷ್ಮಿ ಪೌರಕಾರ್ಮಿಕರು. ಅಂತಹ ಮಹಾಲಕ್ಷ್ಮಿಯರನ್ನ ಮನೆಗೆ ಬರಮಾಡಿಕೊಂಡಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ : ಶಾಸಕಿಗೆ ಹೈಕೋರ್ಟ್ ನೋಟಿಸ್
ನಮ್ಮಪಕ್ಷದ ವರಿಷ್ಠರಾದ ದೇವೇಗೌಡರಿಗೆ ದೇವರು ಆರೋಗ್ಯ ಕೊಟ್ಟು ಇನ್ನು ಹೆಚ್ಚಿನ ರೀತಿಯಲ್ಲಿ ದೇಶ, ರಾಜ್ಯ ಸೇವೆ ಮಾಡಲಿ. ರಾಜ್ಯದ ಜನರ ಸೇವೆಗೆ ಕುಮಾರಸ್ವಾಮಿ ಅವರಿಗೆ ಆರೋಗ್ಯ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದೇವೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.