ಮಂಡ್ಯ : ಬಿ.ಕೆ ಹರಿಪ್ರಸಾದ್ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸಿದೆ. ಅವರಿಗೆ ನೋಟೀಸ್ ಸಹ ಕಳುಹಿಸಲಾಗಿದೆ ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ಧಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಚೆಲುವರಾಯ ಸ್ವಾಮಿ, ಸಿದ್ದರಾಮಯ್ಯ ಅವರ ಬಗ್ಗೆ ಹರಿಪ್ರಸಾದ್ ಮಾತನಾಡಿರೋದು ಪಕ್ಷಕ್ಕೆ ಅಗೌರವ ತಂದಿದೆ, ಕಾಂಗ್ರೆಸ್‌ನ ಹಲವು ಅಧಿಕಾರವನ್ನು ಹರಿಪ್ರಸಾದ್ ಅನುಭವಿಸಿದ್ದಾರೆ. ಹೀಗಿರುವಾಗ ಅವರದ್ದೇ ಪಕ್ಷದವರ ಬಗ್ಗೆ ಮಾತನಾಡಿದ್ದು ತಪ್ಪು, ಇನ್ನೂ ಮುಂದೆ ಹೀಗೆ ಮಾತನಾಡಲ್ಲ ಅಂದುಕೊಂಡಿದ್ದೇನೆ. ಸ್ವಪಕ್ಷದ ಬಗ್ಗೆ ಮಾತನಾಡಿರುವುದು ಸರಿಯಲ್ಲ, ಈ ಕಾರಣಕ್ಕಾಗಿ ಅವರಿಗೆ ನೋಟೀಸ್ ಕಳುಹಿಸಿದ್ದೇವೆ ಎಂದರು.
ಇದನ್ನೂ ಓದಿ : ‘ವರ್ಲ್ಡ್ ಬುಕ್ ಆಫ್ ರೆಕಾರ್ಡ್’ಗೆ ಸೇರಿದ ಸಂವಿಧಾನ ಪೀಠಿಕೆ ವಾಚನ ಕಾರ್ಯಕ್ರಮ!
ಇನ್ನೂ ಮುಂದುವರೆದು ಮಾತನಾಡಿದ ಅವರು, ನನಗೂ ಹರಿಪ್ರಸಾದ್ ಮೇಲೆ ಗೌರವ ಇತ್ತು, ರಾಜ್ಯದಲ್ಲಿ ಪಕ್ಷ ಆಡಳಿತ ನಡೆಸುತ್ತಿದೆ, ಈ ಸಂದರ್ಭದಲ್ಲಿ ಅವರಿಂದ ಇಂತಹ ಮಾತುಗಳು ಬರಬಾರದು. ಕೆಲವೊಮ್ಮೆ ಇಂತಹ ಘಟನೆಗಳು ಪಕ್ಷದ ಮದ್ಯೆ ನಡೆಯುವುದು ಸಾಮಾನ್ಯವಾಗಿದೆ. ಬಿಜೆಪಿಯಲ್ಲಿ ಯತ್ನಾಳ್ ಮೂರು ವರ್ಷ ತಮ್ಮದೇ ಪಕ್ಷದ ಬಗ್ಗೆ ಮಾತನಾಡಿದ್ದಾರೆ, ಈ ವರೆಗೂ ಅವರ ಪಕ್ಷ ಅವರಿಗೆ ಒಂದೇ ಒಂದು ನೋಟೀಸ್ ಕೊಟ್ಟಿಲ್ಲ ಆದರೆ ನಮ್ಮ ಪಕ್ಷ ಹರಿಪ್ರಸಾದ್ ಅವರಿಗೆ ಒಂದೇ ದಿನದಲ್ಲಿ ನೋಟೀಸ್ ಕಳುಹಿಸಿದೆ, ಇದು ನಮ್ಮ ಹಾಗೂ ಬಿಜೆಪಿ ಪಕ್ಷಕ್ಕೂ ಇರುವ ವ್ಯತ್ಯಾಸ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ : ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.