Monday, December 4, 2023
spot_img
- Advertisement -spot_img

ಪಾಡ್‌ಕಾಸ್ಟ್‌ ಆರಂಭಿಸಿದ ಸ್ಟಾಲಿನ್‌; ಪ್ರಧಾನಿ ಮೋದಿಗೆ ಟಕ್ಕರ್‌!

ಚೆನ್ನೈ: ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರು ‘ಸ್ಪೀಕಿಂಗ್ ಫಾರ್ ಇಂಡಿಯಾ’ ಶೀರ್ಷಿಕೆಯಡಿ ಪಾಡ್‌ಕಾಸ್ಟ್ ಸರಣಿ ಶುರು ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ಕೀ ಬಾತ್‌ಗೆ ಟಕ್ಕರ್‌ ನೀಡಿದ್ದಾರೆ.

ಸ್ಟಾಲಿನ್‌ ಅವರು ಪಾಡ್‌ಕಾಸ್ಟ್‌ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಸ್ಟಾಲಿನ್‌, ನಾವು ಭಾರತದ ಒಳಿತಿಗಾಗಿ ಮಾತನಾಡುವ ಅವಶ್ಯಕತೆಯಿದೆ. ಬಿಜೆಪಿ ಮತ್ತು ಅವರ ಆಡಳಿತ ಭಾರತವನ್ನು ಹೇಗೆ ನಾಶ ಮಾಡಿತು? ಎಂಬುದನ್ನು ಜನರಿಗೆ ತಿಳಿಸಿಕೊಡಬೇಕಾಗಿದೆ ಎಂದರು.

ಇದನ್ನೂ ಓದಿ: BREAKING: ಇನ್ಮುಂದೆ ಎಲ್ಲ ವರ್ಗಾವಣೆಗೆ ಸಿಎಂ ಅನುಮತಿ ಕಡ್ಡಾಯ!

ನಾವು ಭಾರತಕ್ಕಾಗಿ ಮಾತನಾಡಲು ಬಯಸುತ್ತೇವೆ. ಭವಿಷ್ಯದಲ್ಲಿ ನಾವು ಸಮಾನತೆಯ, ಸಾಮರಸ್ಯದ ಭಾರತವನ್ನು ಯಾವ ರೀತಿ ನಿರ್ಮಿಸಲಿದ್ದೇವೆ ಎಂಬುದನ್ನೂ ಜನರಿಗೆ ಅರಿವು ಮೂಡಿಸುತ್ತೇವೆ. ನಾನು ದಕ್ಷಿಣ ಭಾಗದಿಂದ ಭಾರತಕ್ಕಾಗಿ ಮಾತನಾಡುತ್ತೇನೆ ಎಂದು ಸ್ಟಾಲಿನ್‌ ಹೇಳಿದರು.

ಸ್ಟಾಲಿನ್‌ ಅವರ ಪಾಡ್‌ಕಾಸ್ಟ್‌ ಆಡಿಯೊ ಸರಣಿಯನ್ನು ಇಂಗ್ಲೀಷ್‌ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಮೂಲಗಳು ತಿಳಿಸಿವೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles